ಆಲಮೇಲ(ಜೂ.13): ಕಡಿಮೆ ಬೆಲೆಯಲ್ಲಿ ಬಂಗಾರ ಕೊಡುವುದಾಗಿ ನಂಬಿಸಿದ ಖದೀಮರು ಸುಮಾರು 9 ಲಕ್ಷ ದೋಚಿದ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕುರಬತ್ತಳ್ಳಿ, ಗುಂದಗಿ ರಸ್ತೆಯ ಪಕ್ಕದಲ್ಲಿ ಶುಕ್ರವಾರ ಸಂಭವಿಸಿದೆ. 

ಮಹಾರಾಷ್ಟ್ರ ಮೂಲದ ಸುನೀಲ ಪ್ರಹ್ಲಾದ ಜಾಧವ ಮೋಸ ಹೋದ ವ್ಯಕ್ತಿ. ಕಡಿಮೆ ಬೆಲೆಯಲ್ಲಿ ಬಂಗಾರ ಕೊಡುವುದಾಗಿ ಕುರಬತ್ತಳ್ಳಿಗೆ ಸುನೀಲ ಹಾಗೂ ಆತನ ಪತ್ನಿಯನ್ನು ಕರೆಯಿಸಿಕೊಂಡಿದ್ದರು.

ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ: ಗುಮಾಸ್ತನಿಗೆ ಬಿತ್ತು ಗೂಸಾ

ಈ ಖದೀಮರ ಮಾತನ್ನು ನಂಬಿ ಬಂದ ದಂಪತಿ ಬಳಿಯಿದ್ದ 9 ಲಕ್ಷ ದೋಚಿದ್ದಲ್ಲದೆ, ಇವರ ಮೇಲೆ ಹಲ್ಲೆ ಮಾಡಿ ಸುನೀಲನ ಪತ್ನಿ ಹತ್ತಿರವಿದ್ದ ಬಂಗಾರದ ಒಡವೆಗಳನ್ನು ಸಹಿತ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಆಲಮೇಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.