Asianet Suvarna News Asianet Suvarna News

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಹೊತ್ತು ಸಾಗಿದ ಮಹಿಳಾ ಪೊಲೀಸ್, ಮೆಚ್ಚುಗೆಯ ಮಹಾಪೂರ!

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರನ್ನು ಸ್ವತಃ ಮಹಿಳಾ ಸಬ್‌ ಇನ್ಸ್‌ಪೆಕ್ಟರ್‌ ತಮ್ಮ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ರವಾನಿಸಿದ ಪ್ರಕರಣವೊಂದು ಚೆನ್ನೈನಲ್ಲಿ ನಡೆದಿದೆ.

ಚೆನ್ನೈ (ನ. 12): ತಮಿಳುನಾಡಿನಾದ್ಯಂತ (Tamilnadu) ಭಾರೀ ಮಳೆ ಸುರಿಯುತ್ತಿದೆ. ಈ ಮಳೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರನ್ನು  ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಬ್‌ ಇನ್ಸ್‌ಪೆಕ್ಟರ್‌ ಸ್ಥಳೀಯರು ಮತ್ತು ಇತರೆ ಪೊಲೀಸರ ನೆರವಿನೊಂದಿಗೆ ಆತನನ್ನು ಎತ್ತಿದ ರಾಜೇಶ್ವರಿ ಆತನನ್ನು ಸೀದಾ ಹೆಗಲ ಮೇಲೆ ಹಾಕಿಕೊಂಡ ಸಮೀಪದಲ್ಲೇ ಇದ್ದ ಆಟೋದವರೆಗೂ ಕೊಂಡೊಯ್ದು ಅದರೊಳಗೆ ಕೂರಿಸಿದರು.

ಮಚ್ಚೆ-ಹಲಗಾ ಬೈಪಾಸ್ ರಸ್ತೆಗೆ ವಿರೋಧ: ಮಹಿಳೆಯರನ್ನು ಎಳೆದಾಡಿ, ಸೀರೆ ಹರಿದು ಹಾಕಿದ ಪೊಲೀಸರು

ಜೊತೆಗೆ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಜೀವ ಉಳಿಸಲು ಬೇಕಿದ್ದ ಎಲ್ಲಾ ಕ್ರಮಕ್ಕೆ ಸೂಚಿಸಿದರು. ಬಳಿಕ ಪ್ರಜ್ಞಾಹೀನ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನಿಗೆ ಪ್ರಜ್ಞೆ ಮರಳಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ.  ಅನಾಥ ವ್ಯಕ್ತಿಯನ್ನು ಹೀಗೆ ಹೆಗಲ ಮೇಲೆ ಹೊತ್ತೊಯ್ದ ರಾಜೇಶ್ವರಿ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ. 

 

Video Top Stories