ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಸಿಕ್ತು ಬಿಡುಗಡೆ ಭಾಗ್ಯ..!
* ಇಂದು ವಿನಯ್ ಕುಲಕರ್ಣಿ ಬಿಡುಗಡೆ ಬಹುತೇಕ ಖಚಿತ
* ಬರೋಬ್ಬರಿ 9 ತಿಂಗಳ ಬಳಿಕ ಕುಲಕರ್ಣಿಗೆ ಬೇಲ್
* ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಕುಲಕರ್ಣಿ
ಧಾರವಾಡ(ಆ.20): ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ ಸಿಕ್ಕಿದೆ. ಬರೋಬ್ಬರಿ 9 ತಿಂಗಳ ಬಳಿಕ ಕುಲಕರ್ಣಿಗೆ ಬೇಲ್ ಸಿಕ್ಕಿದೆ. ಸಾಕ್ಷಿ ನಾಶ ಕೇಸ್‌ನಲ್ಲೂ ವಿನಯ್ ಕುಲಕರ್ಣಿಗೆ ಜಾಮೀನು ಸಿಕ್ಕಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಿಂದ ಬೇಲ್ ಸಿಕ್ಕಿದೆ. ಇಂದೇ ವಿನಯ್ ಕುಲಕರ್ಣಿ ಬಿಡುಗಡೆ ಬಹುತೇಕ ಖಚಿತವಾಗಿದೆ.