Asianet Suvarna News Asianet Suvarna News

ಯಡಿಯೂರಪ್ಪ ಸರ್ಕಾರ ಯಾವಾಗ ಬೀಳುತ್ತೋ ಗೊತ್ತಿಲ್ಲ!

Feb 7, 2020, 1:29 PM IST

ಬಾಗಲಕೋಟೆ(ಫೆ.07): ಸಚಿವ ಸಂಪುಟ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಸರ್ಕಾರದ ಭವಿಷ್ಯ ಅತಂತ್ರವಾಗಿದೆ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಓರಿಜನಲ್ ಪತಿವೃತೆಯರು ಇದ್ದಾರೆ. ನೀವು ಸೀರೆ ಉಡಿಕೆ ಮಾಡಿಕೊಂಡವರಿಗೆ ಕೊಟ್ಟರೆ ಹೆಂಗೆ, ಓರಿಜನಲ್ ಪಟ್ಟದ ಮಹಿಷಿಯರು ಎಲ್ಲಿಗೆ ಹೋಗಬೇಕು ಎಂದು ಹೇಳಿದ್ದಾರೆ. 

ಸಿಎಂ ಯಡಿಯೂರಪ್ಪ ಪರಿಸ್ಥಿತಿ ನೋಡಿದ್ರೆ ನನಗೆ ಅಯ್ಯೋ ಅನಿಸುತ್ತಿದೆ. ಪಾಪ ಸಿಎಂನಷ್ಟು ನೋವು ಪಡ್ತಿರೋರು ಯಾರೂ ಇಲ್ಲ ಅಂತ ಅನ್ಸುತ್ತೆ. ಸರ್ಕಾದಲ್ಲಿ ಎಲ್ಲೆಂದರಲ್ಲಿ ತೂತು ಬಿದ್ದಿವೆ, ಬಿದ್ದ ತೂತುಗಳನ್ನ ಮುಚ್ಚೋದಲ್ಲ, ಪ್ಯಾಚ್ ಹಾಕುವಂತಹದ್ದಾಗಿದೆ.  ಈ ಸರ್ಕಾರ ಯಾವಾಗ ಬೀಳುತ್ತೇ, ಯಾವಾಗ ಎಲೆಕ್ಷನ್ ಬರುತ್ತೇ ಅಂತ ಹೇಳೋಕೆ ಆಗೋದಿಲ್ಲ ಎಂದು ತಿಳಿಸಿದ್ದಾರೆ. 

Video Top Stories