Covid 19: ಉಡುಪಿಯಲ್ಲಿ ವಿದೇಶಿ ಪ್ರಯಾಣಿಕನಿಗೆ ಕೊರೋನಾ
ಉಡುಪಿಯಲ್ಲಿ ವಿದೇಶಿ ಪ್ರಯಾಣಿಕನಿಗೆ ಕೋವಿಡ್ ಸೋಂಕು ತಗುಲಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಕರಾವಳಿಯಲ್ಲಿ ಭಾಗದಲ್ಲಿ ಕೊರೋನಾ ನಾಲ್ಕನೇ ಅಲೆಯ ಭೀತಿ ಎದುರಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಉಡುಪಿಯಲ್ಲಿ ಕೋವಿಡ್ ಪಾಸಿಟಿವ್ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಶೀತ ಜ್ವರ ಉಸಿರಾಟ ಸಮಸ್ಯೆ ಬಂದ್ರೆ ನಿರ್ಲಕ್ಷ್ಯ ಮಾಡಬೇಡಿ. ಜನನಿಬಿಡ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಪಾಡಿ, ಕೊರೋನಾ ಹೋಗಿದೆ ಎಂಬ ಭಾವನೆ ಬೇಡ. ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಿರಿ ಎಂದು ಉಡುಪಿ ಡಿ.ಹೆಚ್.ಓ ಡಾ. ನಾಗಭೂಷಣ ಉಡುಪ ಹೇಳಿದ್ದಾರೆ. ಬೂಸ್ಟರ್ ಡೋಸ್ ನತ್ತ ಸರ್ಕಾರ ಗಮನವನ್ನು ಕೊಡುತ್ತಿದೆ. ಜನರು ಕೂಡಾ ಒಂದು ಮತ್ತು ಎರಡನೇ ಡೋಸ್'ಗೇ ಆಸಕ್ತಿಯನ್ನು ತೋರಿಸಿದ್ದರು. ಈಗ ಬೂಸ್ಟರ್ ಡೋಸ್ ಮೇಲೆ ಆಸಕ್ತಿಯನ್ನು ತೋರಿಸಿದರೆ, ನಾಲ್ಕನೇ ಅಲೆಯ ಭೀತಿಯನ್ನು ತಡೆಯಬಹುದು ಎಂದರು.