ಅಫ್ರಿಕಾ ಬೊಂಬೆಗಳು ದಾವಣಗೆರೆಯಲ್ಲಿ ಪ್ರದರ್ಶನ; ವಿಶೇಷ ಸಾಂಸ್ಕೃತಿಕ ಪ್ರಯೋಗ

- ಅಫ್ರಿಕಾ ಬೊಂಬೆಗಳು ದಾವಣಗೆರೆಯಲ್ಲಿ ಪ್ರದರ್ಶನ - ಪುರಾಣ ಪುಣ್ಯ ಕತೆಗಳ ಮೌಲ್ಯ ಸಾರುವ  ದಸರಾ ಬೊಂಬೆ ಪ್ರದರ್ಶನ- ದಸರಾ ಬೊಂಬೆ ಪ್ರದರ್ಶನಕ್ಕೆ ಕಳೆ ತುಂಬಿದ ಆಫ್ರಿಕಾ ಬೊಂಬೆಗಳು
 

Share this Video
  • FB
  • Linkdin
  • Whatsapp

 ದಾವಣಗೆರೆ (ಅ. 12): ಪುರಾಣ ಪುಣ್ಯ ಕತೆಗಳ ಮೌಲ್ಯ ಸಾರುವ ದಸರಾ ಬೊಂಬೆ ಪ್ರದರ್ಶನ ದಾವಣಗೆರೆಯಲ್ಲಿ ಈ ಬಾರಿ ತುಂಬಾ ವಿಶೇಷವಾಗಿದೆ. 

ದಾವಣಗೆರೆ ಎಸ್‌.ಎಸ್. ಬಡಾವಣೆಯ ಮುರುಗೇಂದ್ರಪ್ಪ ಹಾಗು ಸುಮಂಗಲ ಅವರ ಮನೆಯಲ್ಲಿ ಈ ಬಾರಿ ದಸರಾ ಬೊಂಬೆ ಪ್ರದರ್ಶನ ವಿಶೇಷ ಗಮನ ಸೆಳೆಯುತ್ತಿದೆ. ಅವರ ಮನೆಯಲ್ಲಿ ಚನ್ನಪಟ್ಟಣ ‌ಮೈಸೂರು ಬೊಂಬೆ ಜೊತೆಗೆ ಅಫ್ರಿಕಾ ಖಂಡದ ವಿದೇಶಿ ಬೊಂಬೆಗಳು ಕಣ್ಮನ ಸೆಳೆಯುತ್ತಿವೆ.

ದಸರಾ ಗೊಂಬೆ ಪ್ರದರ್ಶನ: ಜನಮನ ಸೆಳೆಯುತ್ತಿದೆ ಬೊಂಬೆ ಮನೆ

21 ವರ್ಷಗಳನ್ನು ಅಫ್ರಿಕಾದ ನೈಜೀರಿಯಾದಲ್ಲಿ ಕಳೆದ ದಂಪತಿಗಳು ಅಲ್ಲಿನ ವಿಶೇಷತೆಗಳನ್ನು ತಮ್ಮ ಮನೆ ದಸರಾ ಬೊಂಬೆ ಪ್ರದರ್ಶನದಲ್ಲಿ ಪ್ರತಿಬಿಂಬಿಸಿದ್ದಾರೆ. ಅಲ್ಲಿನ‌ ನಿಗ್ರೋ ಕಪ್ಪುವರ್ಣಿಯರ ಕರಕುಶಲ ಕಲೆಗಳನ್ನು ತಂದು ತಮ್ಮ ಮನೆಯಲ್ಲಿ ಅಲಂಕರಿಸಿದ್ದಾರೆ. ದಸರಾ ಬೊಂಬೆ ಜೊತೆ ಅಫ್ರಿಕಾದ ಮರದ‌ ಬೊಂಬೆಗಳು ಅಲ್ಲಿನ ಸಂಸ್ಕೃತಿ ಆಚಾರ ವಿಚಾರಗಳ ಕತೆ ಹೇಳುತ್ತಿವೆ.

Related Video