ದಸರಾ ಗೊಂಬೆ ಪ್ರದರ್ಶನ: ಜನಮನ ಸೆಳೆಯುತ್ತಿದೆ ಬೊಂಬೆ ಮನೆ

  • ಮದುವಣಗಿತ್ತಿಯಂತೆ ಶೃಂಗಾರಗೊಂಡಿರುವ ಮೈಸೂರು ನಗರ 
  • ದಸರಾ ಗೊಂಬೆಗಳು ಕೂಡ ರೆಡಿ; ಗೊಂಬೆಗಳ ಬೃಹತ್ ಪ್ರದರ್ಶನ 
  • ಜನಮನ ಸೆಳೆಯುತ್ತಿದೆ ನಜರ್‌ಬಾದ್‌ ನಲ್ಲಿರುವ ಬೊಂಬೆ ಮನೆ
  • ನವರಾತ್ರಿ ವೇಳೆ ಮನೆ ಮನೆಯಲ್ಲಿ ಗೊಂಬೆ ಕೂರಿಸೋದು ವಾಡಿಕೆ
First Published Oct 7, 2021, 5:12 PM IST | Last Updated Oct 7, 2021, 5:12 PM IST

ಮೈಸೂರು (ಅ.07): ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿದೆ. ಈ ಬಾರಿ ಸರಳ ದಸರಾ (Mysuru Dasara 2021) ಆಚರಣೆಯಾದರೂ ಇಡೀ ಮೈಸೂರು ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ದಸರಾಗಾಗಿ ದಸರಾ ಗೊಂಬೆಗಳು ಕೂಡ ರೆಡಿಯಾಗಿವೆ. ಹೊರ ರಾಜ್ಯಗಳಿಂದ ಬಂದಿರುವ ಗೊಂಬೆಗಳಿಗೆ ಮೈಸೂರಿನಲ್ಲಿ ಶೃಂಗಾರ ಮಾಡಿ ಪ್ರದರ್ಶನಕ್ಕಿಡಲಾಗಿದೆ.

ದಸರಾ ಅಂದ್ರೆ ಕೇವಲ ಒಂದು ಆಚರಣೆ ಅಲ್ಲ. ಅದು ನಮ್ಮ ನಾಡಿನ ಹೆಮ್ಮೆಯ ಪ್ರತೀಕ. ವಿಶ್ವವೇ ಕೊಂಡಾಡುವ ಮೈಸೂರು ದಸರಾ ಆಚರಣೆಯಲ್ಲಿ ಗೊಂಬೆಗಳ (Dasara Dolls) ಪ್ರಾಮುಖ್ಯತೆಯೂ ಸಾಕಷ್ಟಿದೆ. ಅಂತಹ ಗೊಂಬೆಗಳ ಬೃಹತ್ ಪ್ರದರ್ಶನ ಜನಮನ ಸೆಳೆಯುತ್ತಿದೆ.

ಇದನ್ನೂ ನೋಡಿ | ನಾಡಹಬ್ಬ ಮೈಸೂರು ದಸರಾ ಆರಂಭ : ಉದ್ಘಾಟಿಸಿದ ಎಸ್‌.ಎಂ.ಕೃಷ್ಣ

ಮೈಸೂರಿನ ನಜರ್‌ಬಾದ್‌ ನಲ್ಲಿರುವ ಬೊಂಬೆ ಮನೆಯಲ್ಲಿ ದಸರಾ ಕಳೆಗಟ್ಟಿದೆ. ರಾಮ್‌ಸನ್ಸ್ ಪ್ರತಿಷ್ಠಾನದ ಗೊಂಬೆ ಮನೆ ಈಗ ಸಾಂಪ್ರದಾಯಿಕ ಬೊಂಬೆಗಳಿಂದ ರಂಗು ಪಡೆದುಕೊಂಡಿದೆ. ಸುಮಾರು 12 ರಾಜ್ಯಗಳಿಂದ ತರಿಸಿದ ಸಾವಿರಾರು ಗೊಂಬೆಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ಮನೆ ಮನೆಯಲ್ಲಿ ದಸರಾ ಗೊಂಬೆಗಳನ್ನು ಕೂರಿಸುವ ಸಲುವಾಗಿ ಜನರು ಖರೀದಿಯಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಬಣ್ಣ ಬಣ್ಣದ ಗೊಂಬೆಗಳು ಮಕ್ಕಳ ಮನಸೂರೆಗೊಳ್ಳುತ್ತಿದೆ.