ಬೆಳಗಾವಿ: ಪ್ರವಾಹದಲ್ಲಿ ಕೊಚ್ಚಿ ಹೋಯ್ತು ಪೊಲೀಸ್ ಅಧಿಕಾರಿಯಾಗೋ ಕನಸು..!
* ರಣಭೀಕರ ಪ್ರವಾಹದಲ್ಲಿ ಕೊಚ್ಚಿ ಹೋಯ್ತು ಕೃಷ್ಣಾತೀರದ ಜನರ ಬದುಕು
* ಒಬ್ಬೊಬ್ಬರದು ಒಂದೊಂದು ನೋವಿನ ಕಥೆ
* ಪ್ರವಾಹ ಸಂತ್ರಸ್ತ ಯುವಕರ ಕನಸುಗಳಿಗೆ ಕೊಳ್ಳಿ ಇಟ್ಟ ಪ್ರವಾಹ
ಬೆಳಗಾವಿ(ಜು.30): ಪೊಲೀಸ್ ಅಧಿಕಾರಿಯಾಗಬೇಕು ಅನ್ನೊ ಕನಸು ಕಂಡಿದ್ದ ಹುಲಗಬಾಳಿ ಗ್ರಾಮದ ರಾಮಚಂದ್ರ ಪೋತದಾರ್ ಅವರ ಕನಸು ನುಚ್ಚು ನೂರಾಗಿದೆ. ಹೌದು, ದಾಖಲಾತಿಗಳೆಲ್ಲ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ರಾಮಚಂದ್ರ ಪೋತದಾರ್ ದಾಖಲಾತಿ ಸಮೇತ ಪಿಎಸ್ಐ ದೈಹಿಕ ಪರೀಕ್ಷೆಗೆ ಹಾಜರಾಗಬೇಕಿತ್ತು. ಆದರೆ, ಪ್ರವಾಹದಿಂದ ಇಡೀ ಹುಲಗಬಾಳಿ ಗ್ರಾಮವಾಯ್ತು ಜಲಾವೃತ್ತವಾಗಿದೆ. ಇದರಲ್ಲಿ ದಾಖಲಾತಿಗಳೆಲ್ಲ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ ರಾಮಚಂದ್ರ ಪೋತದಾರ್ ಏಷ್ಯಾನೆಟ್ ಸುವರ್ಣ ನ್ಯೂಜ್ ತನ್ನ ತೊಳಲಾಟನ್ನ ತೋಡಿಕೊಂಡಿದ್ದಾನೆ.
ಸಂಪುಟ ರಚನೆ ಒಂದು ವಾರ ಅನುಮಾನ: ಅಧಿಕಾರಿಗಳಿಗೆ ಹೇಳೋರಿಲ್ಲ, ಕೇಳೋರಿಲ್ಲ!