Asianet Suvarna News Asianet Suvarna News

ಸಂಪುಟ ರಚನೆ ಒಂದು ವಾರ ಅನುಮಾನ: ಅಧಿಕಾರಿಗಳಿಗೆ ಹೇಳೋರಿಲ್ಲ, ಕೇಳೋರಿಲ್ಲ!

ರಾಜ್ಯದಲ್ಲಿ ಬಿಎಸ್‌ವೈ ರಾಜೀನಾಮೆ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಆಯ್ಕೆಯಾಗಿದ್ದರೂ, ಸಂಪುಟ ರಚನೆ ಮಾತ್ರ ಇನ್ನೂ ಒಂದು ವಾರ ಅನುಮಾನ. ಹೀಗಾಗಿ ಸಂಪುಟ ರಚನೆಯಾಗದೇ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. 

ಬೆಂಗಳೂರು(ಜು.30): ರಾಜ್ಯದಲ್ಲಿ ಬಿಎಸ್‌ವೈ ರಾಜೀನಾಮೆ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಆಯ್ಕೆಯಾಗಿದ್ದರೂ, ಸಂಪುಟ ರಚನೆ ಮಾತ್ರ ಇನ್ನೂ ಒಂದು ವಾರ ಅನುಮಾನ. ಹೀಗಾಗಿ ಸಂಪುಟ ರಚನೆಯಾಗದೇ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. 

ಹೌದು ರಾಜ್ಯದಲ್ಲೀಗ ವನ್‌ ಮ್ಯಾನ್‌ ಸರ್ಕಾರ ಇರುವುದರಿಂದ ಎಲ್ಲವೂ ಅವರೇ ನೋಡಿಕೊಳ್ಳುವಂತಾಗಿದೆ. ಹೀಗಾಗಿ ಅಧಿಕಾರಿಗಳಿಗೆ ಹೇಳೋರಿಲ್ಲ, ಕೇಳೋರಿಲ್ಲವೆನ್ನುವಂತಾಗಿದೆ. ಸಾರ್ವತ್ರಿಕ ಆದೇಶದ ಬಗ್ಗೆ ಅಂತಿಮ ಆದೇಶ ಬಂದಿಲ್ಲ, ಶಿಕ್ಷಕರ ವರ್ಗಾವಣೆ ಆದೇಶದ ಬಗ್ಗೆ ಸ್ಪಷ್ಟತೆ ಇಲ್ಲ, ಕಂದಾಯ ಇಲಾಖೆಗೂ ಸಚಿವರ ನೇಮಕವಾಗದೇ ನೆರೆ ಪರಿಹಾರ, ಸಂತ್ರಸ್ತರ ಪುನರ್ ವಸತಿ ಬಗ್ಗೆಯೂ ಯಾವ ಆದೇಶ ಬಂದಿಲ್ಲ. ಅಧಿಕಾರಿಗಳ ಆಟದಿಂದಾಗಿ ನೆರೆ ಸಂತ್ರಸ್ತರಿಗೆ ಸಂಕಟವುಂಟಾಗಿದೆ. 

Video Top Stories