Asianet Suvarna News Asianet Suvarna News

ರೇಣುಕಾಚಾರ್ಯಗೆ ದುರ್ಗುಟ್ಟಿದ್ದ ಕೋತಿ ಕೊನೆಗೂ ಅರೆಸ್ಟ್

ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರ ಮೇಲೆ ದಾಳಿ ಮಾಡಲು ಮುಂದಾಗಿದ್ದ ಕೋತಿ ಕೊನೆ ಅರೆಸ್ಟ್ ಆಗಿದೆ.

First Published Dec 16, 2020, 9:09 PM IST | Last Updated Dec 16, 2020, 9:09 PM IST

ದಾವಣಗೆರೆ, (ಡಿ.16):ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರ ಮೇಲೆ ದಾಳಿ ಮಾಡಲು ಮುಂದಾಗಿದ್ದ ಕೋತಿ ಕೊನೆ ಅರೆಸ್ಟ್ ಆಗಿದೆ.

ಹೌದು..ಕೋತಿಯ ದಾಳಿಯಿಂದ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಪಾರಾಗಿರುವ ಘಟನೆ ಹೊನ್ನಾಳಿ ಪಟ್ಟಣದ ತಾಲೂಕು ಆಸ್ಪತ್ರೆ ಬಳಿ ನಡೆದಿದ್ದು ಕಳೆದ ಒಂದೂವರೆ ತಿಂಗಳಿನಿಂದ ಮಂಗ ಸ್ಥಳೀಯರಿಗೆ ಕಾಟ ಕೊಡುತ್ತಿದ್ದು, ಇದುವರೆಗೂ ಸುಮಾರು 30ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿದೆ.

ಕೋತಿ ದಾಳಿಯಿಂದ ಶಾಸಕ ರೇಣುಕಾಚಾರ್ಯ ಬಚಾವ್...!

ಈ ಹಿನ್ನೆಲೆಯಲ್ಲಿ ಈ ಮಂಗನ ಕಾಟದಿಂದ ಬೇಸತ್ತಿರುವ ಜನರು ಬಡಿಗೆ ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.  ಈ ಮಂಗ ಪೌರಕಾರ್ಮಿಕರ ಮೇಲೂ ದಾಳಿ ಮಾಡಿದ್ದು, ಐವರು ಪೌರಕಾರ್ಮಿಕರಿಗೆ ಕಚ್ಚಿ ಗಾಯಗೊಳಿಸಿದೆ. ಸದ್ಯ ಈ ಮಂಗವನ್ನು ಸೆರೆಹಿಡಿಯಲಾಗಿದೆ.

Video Top Stories