ಚೆನ್ನೈ-ಬೆಂಗಳೂರು ಹೈವೇ ಕಾಮಗಾರಿಗೆ ಭೂಮಿ ಸ್ವಾಧೀನ: ಸಿಗದ ಪರಿಹಾರ, ವಿಷ ಸೇವಿಸಿದ ಅನ್ನದಾತ

ಚೆನ್ನೈ ಮತ್ತು ಬೆಂಗಳೂರು ಹೈವೇ ಕಾಮಗಾರಿಗೆ ರೈತರಿಂದ ಜಮೀನನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಆದ್ರೆ ಅವರಿಗೆ ಇಲ್ಲಿ ತನಕ ಪರಿಹಾರವನ್ನು ನೀಡಿಲ್ಲ.
 

First Published Aug 6, 2023, 12:26 PM IST | Last Updated Aug 6, 2023, 12:26 PM IST

ಕೋಲಾರ: ಚೆನ್ನೈ ಮತ್ತು ಬೆಂಗಳೂರು ಹೈವೇ ಕಾಮಗಾರಿಗೆ ರೈತರ (Farmer) ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಶಪಡಿಸಿಕೊಂಡಿತ್ತು. ಆದ್ರೆ ಅವರಿಗೆ ಪರಿಹಾರವನ್ನು ನೀಡಿರಲಿಲ್ಲ. ಹೀಗಾಗಿ ಜಮೀನು ಕಳೆದುಕೊಂಡಿರುವ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಅಲ್ಲದೇ ರೈತ ಕುಟುಂಬದ ಮೂವರು ಫ್ಲೈಓವರ್‌ ಮೇಲೆ ವಿಷವನ್ನು ಸಹ ಸೇವಿಸಿದ್ದಾರೆ. ಸದ್ಯ ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಅಧಿಕಾರಿಗಳು ಪರಿಹಾರ (compensation) ನೀಡದ ಹಿನ್ನೆಲೆ ರೈತರು ಈ ರೀತಿ ಮಾಡಿದ್ದಾರೆ. ಇವರನ್ನು ಸಂಸದ ಮುನಿಸ್ವಾಮಿ(MP Muniswamy) ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  ಕಡಿಮೆಯಾಯ್ತು ಮಳೆ.. ಮತ್ತೆ KRS ನಂಬಿದವರಿಗೆ ಆತಂಕ..!