Asianet Suvarna News Asianet Suvarna News

ಬಳ್ಳಾರಿ: ದಶಕಗಳಿಂದ ಉಳಿಮೆ ಮಾಡಿಕೊಂಡು ಬಂದಿದ್ದ ಜಮೀನು ಕೈತಪ್ಪುವ ಆತಂಕ!

ಇದೇ ಜಮೀನನ ಪ್ರದೇಶದಲ್ಲಿ ಕೆಲವರಿಗೆ ಪಟ್ಟಾ ನೀಡಿದ್ದಾರಂತೆ. ಉಳಿದ 200ಕ್ಕೂ ಹೆಚ್ಚು ದಲಿತ ಕುಟುಂಬಗಳಿಗೂ ಕಂದಾಯ ಭೂಮಿ ಎಂದು ನಮೂದು ಮಾಡಿ ಪಟ್ಟಾ ನೀಡುವಂತೆ ಆಗ್ರಹಿಸುತ್ತಿದ್ದಾರೆ.
 

ಬಳ್ಳಾರಿ(ಡಿ.06):  ಅದು ಸ್ವಾತಂತ್ರ್ಯ ಪೂರ್ವದಿಂದಲೂ ಉಳುಮೆ ಮಾಡಿಕೊಂಡು ಬಂದಿರೋ ಜಮೀನು. ಆದರೆ ಕೆಲ ವರ್ಷಗಳ ಹಿಂದೆ ಸರ್ಕಾರ ಆ ಜಮೀನಿನ ಪಹಣಿಯಲ್ಲಿ ಪದನಾಮವಾಗಿ ಮಲ್ಲಪ್ಪನ ಕೆರೆ ಎಂದು ಬರೆಯಲಾಗಿದೆ. ಇದು ಈ ರೈತರ ನೆಮ್ಮದಿಗೇ ಕೊಳ್ಳಿ ಇಟ್ಟಿದೆ. ದಶಕಗಳಿಂದ ಉಳಿಮೆ ಮಾಡಿಕೊಂಡು ಬಂದಿದ್ದ ಜಮೀನು ಕೈತಪ್ಪುವ ಆತಂಕ ಎದುರಾಗಿದೆ.

ಇಲ್ನೋಡಿ ಹಚ್ಚ ಹಸಿರಿನ ಭೂಮಿ.. ಬಂಗಾರದಂತ ಈ ಬೆಳೆ ನೋಡ್ತಾ ನಿಂತ್ರೆ ರೈತನ ಮೊಗದಲ್ಲಿ ಮಂದಹಾಸ ಮೂಡುತ್ತೆ.. ಆದ್ರೆ, ಚಿನ್ನದ ಬೆಳೆ ಬಂದರೂ ಈ ರೈತರಿಗೆ ಸಂತೋಷವಿ.. ಮನಸ್ಸಿಗೆ ನೆಮ್ಮದಿ ಇಲ್ಲ.. ಯಾಕಂದ್ರೆ ಇದು ಕೆರೆ ಒತ್ತುವರಿ ಮಾಡಿಕೊಂಡ ಜಮೀನು ಅನ್ನೋ ಆರೋಪ ಕೇಳಿ ಬಂದಿದ್ದು, ತಮ್ಮನ್ನ ಒಕ್ಕಲೆಬ್ಬಿಸುವ ಆತಂಕ ಈ ರೈತರನ್ನು ಕಾಡುತ್ತಿದೆ. ಹೀಗಾಗಿ ಜಮೀನು ಉಳಿಸಿಕೊಳ್ಳಲು ಹೋರಾಟಕ್ಕೆ ಇಳಿದಿದ್ದಾರೆ.

ಮಂಡ್ಯ ಡಿಸಿ ಕಚೇರಿ ಎದುರು ರೈತ ಸಂಘಗಳ ಹೈಡ್ರಾಮಾ: ತಾರಕಕ್ಕೇರಿದ ಜಗಳ...!

ಜಮೀನಿಗಾಗಿ ದಶಕಗಳಿಂದಲೂ ಹೋರಾಟ ಮಾಡುತ್ತಿರೋ ದಲಿತ ಕುಟುಂಬಗಳು.. ಯಾರೋ ಮಾಡಿದ ತಪ್ಪಿಗೆ ಮತ್ಯಾನಿರಿಗೋ ಶಿಕ್ಷೆ ಎನ್ನುವಂತಾಗಿದೆ ಕುರಗೋಡು ರೈತರ ಪರಿಸ್ಥಿತಿ.. ಹೀಗೆ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸೋ ಮೂಲಕ ಹೋರಾಟ ಮಾಡುತ್ತಿರೋ ಇವರೆಲ್ಲರೂ ಕುರುಗೋಡು ತಾಲೂಕಿನ ನಿವಾಸಿಗಳು. 

ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಮಲ್ಲಪ್ಪನ ಕೆರೆಯ 246ಎಕರೆ ಪ್ರದೇಶದಲ್ಲಿ 200ಕ್ಕೂ ಹೆಚ್ಚು ರೈತರು 1928ರಿಂದಲೂ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಈಗಲೂ ಸಹ ಜಮೀನನಲ್ಲಿ ಬೆಳೆಯಿದೆ. ಆದ್ರೆ, ಇಲ್ಲಿ ಮಲ್ಲಪ್ಪನ ಕೆರೆ ಅನ್ನೋ ಹೆಸರಿರೋ ಕಾರಣಕ್ಕೆ  ಇಲ್ಲೊಂದು ಕೆರೆ ಇತ್ತು. ಅದನ್ನು ಒತ್ತುವರಿ ಮಾಡಿಕೊಂಡು ಊಳುಮೆ ಮಾಡುತ್ತಿರೋದಾಗಿ ಅಧಿಕಾರಿಗಳು ಹೆಳ್ತಿದ್ದಾರಂತೆ. ಆದ್ರೆ ಇದು ಕೆರೆ ಜಮೀನಲ್ಲ.. ಮಲ್ಲಪ್ಪನ ಕೆರೆ ಅನ್ನೋ ಹೆಸರಿನ ಕಾರಣಕ್ಕೆ ನಮಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ಮಲ್ಲಪ್ಪನ ಕೆರೆ ಎನ್ನುವ ಪದನಾಮ ತೆಗೆದು ಕಂದಾಯ ಭೂಮಿ ಎಂದು ನಮೂದು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಗೆ ಇಳಿದಿದ್ದಾರೆ. 

ರೇವಂತ್‌ ರೆಡ್ಡಿ ತೆಲಂಗಾಣದ ಹೊಸ ಸಿಎಂ, ಡಿ.7ಕ್ಕೆ ಪ್ರಮಾಣವಚನ!

ಸ್ಥಳೀಯ ಜನಪ್ರತಿನಿಧಿಗಳಿಂದ ಹಿಡಿದು ಜಿಲ್ಲಾಧಿಕಾರಿ ಮತ್ತು ಕಂದಾಯ ಮಂತ್ರಿ ಸೇರಿದಂತೆ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಗಿದೆ. ಕರುಗೋಡು ತಾಲೂಕಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡೋ ಮೂಲಕ ದಲಿತ ರೈತರನ್ನು ರಕ್ಷಿಸಿ ಎಂದು ಹೋರಾಟ ಮಾಡಿದ್ದಾಯ್ತು. ಇದೀಗ ಅನಿರ್ದಿಷ್ಟಾವಧಿ ಹೋರಾಟಕ್ಕಿಳಿದಿರೋ ರೈತರು ಬೆಳಗಾವಿ ಅಧಿವೇಶನದಲ್ಲಾದ್ರೂ ಮಲ್ಲಪ್ಪನ ಕೆರೆ ಅನ್ನೋ ಹೆಸರನ್ನು ತೆಗೆದು ಇದನ್ನು ಕಂದಾಯ ಭೂಮಿ ಎಂದು ಮಾಡಲು ಆಗ್ರಹಿಸುತ್ತಿದ್ದಾರೆ.

ಇನ್ನು ಇದೇ ಜಮೀನನ ಪ್ರದೇಶದಲ್ಲಿ ಕೆಲವರಿಗೆ ಪಟ್ಟಾ ನೀಡಿದ್ದಾರಂತೆ. ಉಳಿದ 200ಕ್ಕೂ ಹೆಚ್ಚು ದಲಿತ ಕುಟುಂಬಗಳಿಗೂ ಕಂದಾಯ ಭೂಮಿ ಎಂದು ನಮೂದು ಮಾಡಿ ಪಟ್ಟಾ ನೀಡುವಂತೆ ಆಗ್ರಹಿಸುತ್ತಿದ್ದಾರೆ.

Video Top Stories