ಹಾವೇರಿ: ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ರೈತರ ಬದುಕು ಮೂರಾಬಟ್ಟೆ..!
* ಆತ್ಮಹತ್ಯೆ ಮಾಡಿಕೊಳ್ಳೋದೊಂದೇ ದಾರಿ ಅಂತಿದ್ದಾರೆ ಸಿಎಂ ತವರು ಜಿಲ್ಲೆಯ ಜನ
* ಅಂಗೈನಲ್ಲಿ ಜೀವ ಹಿಡಿದೇ ಸಾಗಬೇಕಿದೆ ಜನ
* ವಯೋವೃದ್ದರು, ಗರ್ಭಿಣಿ ಹೆಂಗಸರು, ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡೇ ಓಡಾಡೋ ಪರಿಸ್ಥಿತಿ
ಹಾವೇರಿ(ಆ.01): ಪ್ರವಾಹ ತಗ್ಗಿದರೂ ಕೊಳೆತು ನಾರುತ್ತಿವೆ ಸಾವಿರಾರು ಎಕರೆ ಜಮೀನಿನಲ್ಲಿರುವ ಬೆಳೆಗಳು. ಹೌದು, ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯಲ್ಲಿ ನೆರೆಯಲ್ಲಿ ಗೋವಿನಜೋಳ, ಹತ್ತಿ, ಕಬ್ಬು, ಸೋಯಾಬಿನ್, ಮೆಣಸಿನಕಾಯಿ ಬೆಳೆ ಕೊಳೆತು ಹೋಗಿದೆ. ಸಾಲ ಮಾಡಿ ಬಿತ್ತನೆ ಕಾರ್ಯ ಮಾಡಿದ್ದ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಭೀಕರ ಪ್ರವಾಹದ ಎಫೆಕ್ಟ್‌ನಿಂದಾಗಿ ರೈತರು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.