
ದೇಶಕ್ಕೆ ಕೊರೋನಾ ಚಿಂತೆಯಾದ್ರೆ ಇವರಿಗೆ ಸನ್ಮಾನದ್ದೇ ಚಿಂತೆ: ಸಾಮಾಜಿಕ ಅಂತರಕ್ಕೆ ಡೋಂಟ್ ಕೇರ್..!
ಸಾಮಾಜಿಕ ಅಂತರವಿಲ್ಲದೆ ಬೀಳ್ಕೊಡುಗೆ ಸಮಾರಂಭ| ರಾಯಚೂರು ಜಿಲ್ಲೆ ಸಿಂಧನೂರು ನಗರದಲ್ಲಿ ನಡೆದ ಕಾರ್ಯಕ್ರಮ| ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರು|
ರಾಯಚೂರು(ಮೇ.31): ಕೊರೋನಾ ಅತಂಕದ ಮಧ್ಯೆ ಸಾಮಾಜಿಕ ಅಂತರವಿಲ್ಲದೆ ಬೀಳ್ಕೊಡುಗೆ ಸಮಾರಂಭ ನಡೆದ ಘಟನೆ ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದಿದೆ. ನಿವೃತ್ತ ಜೆಸ್ಕಾಂ ಇಂಜಿನೀಯರ್ ಅವರಿಗೆ ಅದ್ಧೂರಿಯಾಗಿ ಬೀಳ್ಕೊಡುಗೆ ಸಮಾರಂಭ ನಡೆದಿದೆ. ಕಾರ್ಯಕ್ರಮದಲ್ಲಿ ಸಾಕಷ್ಟು ಮಂದಿ ಪಾಲ್ಗೊಂಡಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೊರೋನಾ ಸೋಂಕು: 9ರಿಂದ 7ನೇ ಸ್ಥಾನಕ್ಕೆ ಜಿಗಿಯುತ್ತಾ ಭಾರತ..?
ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ ಯಾರೂ ಸಾಮಾಜಿಕ ಅಂತರವನ್ನ ಕಾಯ್ದುಕೊಂಡಿಲ್ಲ, ಮಾಸ್ಕ್ ಧರಿಸದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಜನರು ಸಾಲು ಸಾಲಾಗಿ ನಿಂತು ನಿವೃತ್ತ ಜೆಸ್ಕಾಂ ಇಂಜಿನೀಯರ್‌ಗೆ ಸನ್ಮಾನ ಮಾಡಿದ್ದಾರೆ.