Asianet Suvarna News Asianet Suvarna News

ಚಿಕ್ಕಮಗಳೂರು: ವಿದ್ಯುತ್ ಬೇಲಿ ತಗುಲಿ ಕಾಡಾನೆ ಸಾವು

Aug 4, 2021, 10:55 AM IST

ಚಿಕ್ಕಮಗಳೂರು (ಆ. 04):  ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಸಮಸ್ಯೆ ಇದ್ದಿದ್ದೆ. ಒಂದು ಸಲ ತೋಟಕ್ಕೆ ನುಗ್ಗಿದರೆ ಬೆಳೆಗಳನ್ನೆಲ್ಲಾ ನಾಶ ಮಾಡಿ ಬಿಡುತ್ತವೆ. ಚಿಕ್ಕಮಗಳೂರಿನಲ್ಲಿ  ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು,  ತಡೆಯಲು ಕಾಫಿ ತೋಟದ ಸುತ್ತ ವಿದ್ಯುತ್ ತಂತಿ ಬೇಲಿ ಹಾಕಲಾಗಿತ್ತು. ಈ ಬೇಲಿಗೆ ಸಿಲುಕಿ ಕಾಡಾನೆ ಮೃತಪಟ್ಟಿದೆ. ಬೆಳೆ ತಡೆಯಲು ಸೋಲಾರ್ ಬೇಲಿ ಹಾಕಲು ಅನುಮತಿ ನೀಡಲಾಗಿದೆ. ವಿದ್ಯುತ್ ಬೇಲಿ ಹಾಕಲು ಅನುಮತಿ ನೀಡಿಲ್ಲ. ಇದು ಗೊತ್ತಿದ್ದೂ ಅರಣ್ಯ ಇಲಾಖೆ ಜಾಣ ಕುರುಡು ಪ್ರದರ್ಶಿಸಿದೆ.