ಹಾಸನದಲ್ಲಿ ನಾಡಿಗೆ ಲಗ್ಗೆಯಿಟ್ಟ ಕಾಡಾನೆಗಳ ಕಾರ್ಯಾಚರಣೆ: 4ನೇ ದಿನ ಇನ್ನೊಂದು ಆನೆ ಸೆರೆ !

ಹಾಸನ ಜಿಲ್ಲೆಯಲ್ಲಿ ಆಪರೇಷನ್ ಎಲಿಫೆಂಟ್ ಮುಂದುವರೆದಿದೆ. ನಾಲ್ಕನೇ ದಿನದ ಕಾರ್ಯಾಚರಣೆಯಲ್ಲಿ ಆಪರೇಷನ್ ಒಂಟಿ ಕೋರೆ ಸಕ್ಸಸ್ ಆಗಿದೆ. ಬರೋಬ್ಬರಿ ಆರು ಗಂಟೆಗಳ ಕಾರ್ಯಾಚರಣೆ ನಂತರ ಕಡೆಗೂ ಒಂಟಿ ಕೋರೆ ಆನೆ ಖೆಡ್ಡಾಕ್ಕೆ ಬೀಳಿಸಿತು ಅರಣ್ಯ ಇಲಾಖೆ.
 

First Published Nov 30, 2023, 10:39 AM IST | Last Updated Nov 30, 2023, 10:39 AM IST

ಮಲೆನಾಡಿನ ಭಾಗದಲ್ಲಿ ಕಾಡಾನೆಗಳ ಹಾವಳಿ ಜನರ ನಿದ್ದೆಗೆಡಿಸಿದೆ. ಅದರಲ್ಲೂ ಹಾಸನ(Hassan) ಜಿಲ್ಲೆಯ ಆಲೂರು, ಬೇಲೂರು, ಸಕಲೇಶಪುರ ಭಾಗದಲ್ಲಿ ಗಜಪಡೆ ಆತಂಕದಲ್ಲೇ ಜನ ಬದುಕುತ್ತಿದ್ದಾರೆ. ಕಾಡಾನೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಗಳು ಕೇಳಿ ಬಂದಿದ್ವು. ಇದರ ಬೆನ್ನಲ್ಲೇ ಸಾಕಾನೆಗಳೊಂದಿಗೆ ಕಾಡಾನೆ(Elephant) ಹಂಟಿಂಗ್ ಶುರುವಾಗಿತ್ತು.ಕಾರ್ಯಾಚರಣೆ ಶುರುವಾಗಿ ನಾಲ್ಕನೇ ದಿನಕ್ಕೆ ಮತ್ತೊಂದು ಆನೆ  ಸೆರೆ ಹಿಡಿಯಲಾಗಿದೆ. ಬೇಲೂರು ತಾಲೂಕಿನ ಬಿಕ್ಕೋಡು ಭಾಗದಲ್ಲಿ 6 ಸಾಕಾನೆಗಳ ಮೂಲಕ ಕಾಡಾನೆ ಸೆರೆ ಹಿಡಿಯಲಾಗಿದೆ. ಬೆಳಗ್ಗೆ 11 ಗಂಟೆಗೆ ಟ್ರೇಸ್ ಆಗಿದ್ದ ಒಂಟಿ ಕೋರೆ  ಸಲಗ, ಕಿಲೋ ಮೀಟರ್ ಗಟ್ಟಲೇ ಸುತ್ತಾಡಿಸಿತ್ತು. ಕೊನೆಗೂ ಅರವಳಿಕೆ ಚುಚ್ಚು ಮದ್ದು ನೀಡಿ ಆನೆ ಸೆರೆ ಹಿಡಿಯಲಾಯ್ತು. ಸಾಕಾನೆಗಳು ಹಾಗೂ ಜೆಸಿಬಿಗಳ ನೆರವಿನೊಂದಿಗೆ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಿ ಶಿಫ್ಟ್ ಮಾಡಲಾಯಿತು. ಕಾರ್ಯಾಚರಣೆ ವೇಳೆ ಸೆರೆ ಸಿಕ್ಕ ಆನೆಗೆ ಒಂದು ಕೋರೆಯೇ ಇಲ್ಲ. ಈ ಒಂಟಿ ಕೋರೆ ಸಲಗ ಬೇಲೂರು(Belur) ಭಾಗದ ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು. 30 ಕಾಡಾನೆಗಳಿದ್ದ ದೊಡ್ದ ಗುಂಪನ್ನು ಒಂಟಿ ಕೋರೆ ಸಲಗ ಲೀಡ್ ಮಾಡುತ್ತಿತ್ತು. ಹೀಗಾಗಿ ಅರಣ್ಯ ಇಲಾಖೆ ಆಪರೇಷನ್ ಒಂಟಿ ಸಲಗ ಆರಂಭಿಸಿದ್ದರು.. ಕಾರ್ಯಾಚರಣೆ ಆರಂಭಿಸಿದ ನಾಲ್ಕನೇ ದಿನಕ್ಕೆ ಒಂಟಿ ಕೋರೆ ಸಲಗ ಸೆರೆ ಸಿಕ್ಕಿದ್ದು ಸ್ಥಳೀಯರಲ್ಲಿ ಕೊಂಚ ಸಮಧಾನ ತಂದಿದೆ.ಆನೆಗಳ ಉಪಟಳಕ್ಕೆ ಕಡಿವಾಣ ಹಾಲು ಆಪರೇಷನ್ ಎಲಿಫೆಂಟ್ ನಡೆಸಲಾಗ್ತಿದೆ. ಇದುವರೆಗೆ ಅರಣ್ಯ ಇಲಾಖೆ(Forest Department) ಕಾರ್ಯಾಚರಣೆ ನಡೆಸಿ 3 ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ, 2 ಕಾಡಾನೆಗಳನ್ನು ಸ್ಥಳಾಂತರ ಮಾಡಿದೆ.ಹೆಚ್ಚಿನ ಉಪಟಳ ನೀಡೋ ಕಾಡಾನೆಗಳ ಶಿಫ್ಟ್ ಮಾಡುತ್ತಿರುವ ಅರಣ್ಯ ಇಲಾಖೆ ನಿರ್ಧಾರ ಜನರ ಆತಂಕವನ್ನು ಕೊಂಚ ದೂರ ಮಾಡಿದೆ.

ಇದನ್ನೂ ವೀಕ್ಷಿಸಿ:  ರಕ್ತದಾನಿಗಳ ಕೊರತೆ, ಬರಿದಾಗುತ್ತಿವೆ ಬ್ಲಡ್ ಬ್ಯಾಂಕ್‌ಗಳು: ತುರ್ತು ಪರಿಸ್ಥಿತಿಯಲ್ಲಿ ಬ್ಲಡ್‌ಗಾಗಿ ರೋಗಿಗಳ ಪರದಾಟ

Video Top Stories