ಬಂಡೀಪುರ: ಪ್ರವಾಸಿಗರ ಪುಂಡಾಟಕ್ಕೆ ಕೆರಳಿದ ಕಾಡಾನೆ! ಮುಂದೆ ಮಾಡಿದ್ದಿದು...
ಇಲ್ಲಿನ ಪ್ರವಾಸಿಗರ ಪುಂಡಾಟಕ್ಕೆ ಕೆರಳಿದ ಕಾಡಾನೆಯೊಂದು ಕಾರಿನಿಂದ ಇಳಿದು ಫೋಟೋ ತೆಗೆಯುತ್ತಿದ್ದ ಪ್ರವಾಸಿಗನನ್ನು ಅಟ್ಟಾಡಿಸಿದೆ. ವನ್ಯಜೀವಿ ಕಾಯ್ದೆಯನ್ನು ಉಲ್ಲಂಘಿಸಿ ಕಾಡಿಗೆ ಪ್ರವಾಸಿಯೊಬ್ಬ ಎಂಟ್ರಿ ಕೊಟ್ಟಿದ್ದನು.
ಗುಂಡ್ಲುಪೇಟೆ (ಏ.18): ಬಂಡೀಪುರದಲ್ಲಿ ಪ್ರವಾಸಿಗರ ಪುಂಡಾಟಕ್ಕೆ ಕೆರಳಿದ ಕಾಡಾನೆಯೊಂದು ಕಾರಿನಿಂದ ಇಳಿದು ಫೋಟೋ ತೆಗೆಯುತ್ತಿದ್ದ ಪ್ರವಾಸಿಗನನ್ನು ಅಟ್ಟಾಡಿಸಿದೆ. ವನ್ಯಜೀವಿ ಕಾಯ್ದೆಯನ್ನು ಉಲ್ಲಂಘಿಸಿ ಕಾಡಿಗೆ ಪ್ರವಾಸಿಯೊಬ್ಬ ಎಂಟ್ರಿ ಕೊಟ್ಟಿದ್ದನು. ಈ ಸಂದರ್ಭದಲ್ಲಿ ಕಾಡಿನಲ್ಲಿ ನಿಂತಿದ್ದ ಪ್ರವಾಸಿಯನ್ನು ಕಂಡ ಕಾಡಾನೆ ಸಿಟ್ಟಿಗೆದ್ದು, ಆತನನ್ನು ಅಟ್ಟಾಡಿಸಿಕೊಂಡು ಹೋಗಿದೆ. ಈ ವೇಳೆ ಪ್ರವಾಸಿಗ ಎದ್ದು - ಬಿದ್ದು ಓಡಿ ಹೋಗಿದ್ದಾನೆ. ಏಪ್ರಿಲ್ 9ರಂದು ಈ ಘಟನೆ ನಡೆದಿದ್ದು, ಬಂಡೀಪುರದ ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ. ಬಂಡೀಪುರ ಅರಣ್ಯ ಸಿಬ್ಬಂದಿಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
ದಿಂಗಾಲೇಶ್ವರ ಸ್ವಾಮೀಜಿ ಊಸರವಳ್ಳಿ ತರ ಬಣ್ಣ ಬದಲಾಯಿಸಿ ಮಾತಾಡ್ತಾರೆ ಎಂದ ಸಚಿವ