Jogi: ಜೋಗಿ ವಿರಚಿತ 'ಹಸ್ತಿನಾವತಿ' ಕಾದಂಬರಿ ಬಿಡುಗಡೆ
ಕನ್ನಡ ಪ್ರಭ ಪುರವಣಿಯ ಸಂಪಾದಕ ಹಾಗೂ ಖ್ಯಾತ ಸಾಹಿತಿ ಜೋಗಿ ವಿರಚಿತ 'ಹಸ್ತಿನಾವತಿ' ಕಾದಂಬರಿಯ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಬೆಂಗಳೂರಿನ ಬಸವನಗುಡಿ ವಾಡಿಯಾ ಸಭಾಂಗಣದಲ್ಲಿ ಕನ್ನಡ ಪ್ರಭ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ) ವಿರಚಿತ 'ಹಸ್ತಿನಾವತಿ' ಕಾದಂಬರಿ ಹಾಗೂ ವೈಯೆನ್ಕೆ ಅನ್‌ಲಿಮಿಟೆಡ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ನಟ ಅನಂತ್‌ನಾಗ್, ಟಿ.ಎನ್ ಸೀತಾರಾಮ್ ಹಾಗೂ ಕನ್ನಡಪ್ರಭ, ಸುವರ್ಣ ನ್ಯೂಸ್ ಚೀಫ್ ಮೆಂಟರ್ ರವಿ ಹೆಗಡೆ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಟ ಅನಂತ್‌ನಾಗ್ ಹಸ್ತಿನಾವತಿ ಕೃತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರವಿ ಹೆಗಡೆ ಮಾತನಾಡಿ, YNK ಬರಹಗಳಿಂದ ಯುವಜನತೆ ಕಲಿಯುವುದು ಬಹಳಷ್ಟು ಇದೆ ಎಂದು ಹೇಳಿದರು. ಇನ್ನು ವೈಯೆನ್ಕೆ ಅನ್‌ಲಿಮಿಟೆಡ್ ಆಯ್ದ ಬರಹಗಳ ಕೃತಿಯಾಗಿದ್ದು ಹಾಗೂ ಹಸ್ತಿನಾವತಿ ಹಲವು ವಿಸ್ತಾರ ಹೊಸ ಆಯಾಮದ ಕಾದಂಬರಿಯಾಗಿದೆ.