ಪತ್ನಿಗೆ ಹೆರಿಗೆ ಮಾಡಿಸ್ಬೇಕು, ದಂಪತಿಗೆ ಮಾತೂ ಬರಲ್ಲ, ಕಿವಿಯೂ ಕೇಳಲ್ಲ, ಪ್ರೀತಿ ಜೋಡಿಯ ಮೌನರಾಗ
ಪತ್ನಿ ಏಳು ತಿಂಗಳ ಗರ್ಭಿಣಿ. ಹೆರಿಗೆಯಾದರೆ ಮಗು ಹಾಗೂ ಪತ್ನಿಯನ್ನು ಜೋಪಾನ ಮಾಡಲೂ ಮನೆಯಲ್ಲಿ ಮತ್ತಾರೂ ಇಲ್ಲ. ತವರೂರಿಗೆ ಹೋಗಬೇಕೆಂದರೆ ಲಾಕ್‌ಡೌನ್. ಸಮಸ್ಯೆಯನ್ನು ಹೇಳೋಣ ಎಂದರೆ ಇಬ್ಬರಿಗೂ ಮಾತು ಬರೋದಿಲ್ಲ, ಕಿವಿ ಕೇಳೋದಿಲ್ಲ. ಮಾತೂ ಬರದೆ, ಕಿವಿಯೂ ಕೇಳದ ಈ ಜೋಡಿ ತಮ್ಮ ಕಷ್ಟ ಹೇಳಿಕೊಂಡಿರುವುದು ಎಂತವರನ್ನೂ ಭಾವುಕವಾಗಿಸುತ್ತದೆ. ಇಲ್ಲಿದೆ ನೋಡಿ ವಿಡಿಯೋ
ಧಾರವಾಡ(ಏ.29): ಪತ್ನಿ ಏಳು ತಿಂಗಳ ಗರ್ಭಿಣಿ. ಹೆರಿಗೆಯಾದರೆ ಮಗು ಹಾಗೂ ಪತ್ನಿಯನ್ನು ಜೋಪಾನ ಮಾಡಲೂ ಮನೆಯಲ್ಲಿ ಮತ್ತಾರೂ ಇಲ್ಲ. ತವರೂರಿಗೆ ಹೋಗಬೇಕೆಂದರೆ ಲಾಕ್‌ಡೌನ್. ತಮ್ಮಿಬ್ಬರ ಈ ಸಮಸ್ಯೆಯನ್ನು ಯಾರಿಗಾದರೂ ಹೇಳೋಣ ಎಂದರೆ ಇಬ್ಬರಿಗೂ ಮಾತು ಬರೋದಿಲ್ಲ, ಕಿವಿ ಕೇಳೋದಿಲ್ಲ. ಮಾತೂ ಬರದೆ, ಕಿವಿಯೂ ಕೇಳದ ಈ ಜೋಡಿ ತಮ್ಮ ಕಷ್ಟ ಹೇಳಿಕೊಂಡಿರುವುದು ಎಂತವರನ್ನೂ ಭಾವುಕವಾಗಿಸುತ್ತದೆ.
ತವರೂರಿಗೆ ಹೋಗಬೇಕಾದ ಅನಿವಾರ್ಯ ಸ್ಥಿತಿ. ಆದರೆ, ಹೇಗೆ ಹೋಗಬೇಕು ಎಂಬುದೇ ಅವರಿಗೆ ತಿಳಿಯದೆ, ವಿಡಿಯೋದಲ್ಲಿ ಸನ್ನೆಯ ಮೂಲಕವೇ ಮನವಿ ಮಾಡಿಕೊಂಡು ಇಬ್ಬರೂ ತಮ್ಮ ಪಾಲಕರಿಗೆ ಕಳುಹಿಸಿದ್ದಾರೆ.
ಇನ್ನೊಂದು ಹೆಜ್ಜೆ ಮುಂದೆಹೋದ ಹೆಬ್ಬಾಳ್ಕರ್: ಕ್ಷೇತ್ರದ ಜನರಿಗೆ 'ಭಾಗ್ಯದ' ಲಕ್ಷ್ಮೀ
ಕೈ ಮತ್ತು ಬಾಯಿ ಸನ್ನೆ ಮಾಡುವ ಮೂಲಕ ನಮ್ಮನ್ನು ಕರೆದೊಯ್ಯಿರಿ ಎಂದು ಅಂಗಲಾಚುತ್ತಿರುವುದು ಎಂತಹ ಮನಸ್ಸಿಗೂ ಖೇದ ಎನಿಸುತ್ತದೆ. ಕಷ್ಟದ ಸಂದರ್ಭದಲ್ಲೂ ಜೊತೆಯಾಗಿ ನಿಂತ ಈ ಜೋಡಿ ಎಲ್ಲರಿಗೂ ಮಾದರಿ.