Asianet Suvarna News Asianet Suvarna News

ಪ್ರತಿಭಟನೆ ವೇಳೆ ಕುಡುಕನ ಕಾಟ : ನಾನೂ ರೈತನ ಮಗನೇ..

Sep 27, 2021, 11:52 AM IST

ಬೆಂಗಳೂರು (ಸೆ.27): ಭಾರತ್ ಬಂದ್ (Bharat Bandh ) ಹಿನ್ನೆಲೆ ನಡೆಯುತ್ತಿರುವ ಪ್ರತಿಭಟನೆ ವೇಳೆ ಕುಡುಕನೋರ್ವ ಗಲಾಟೆ ಮಾಡಿದ ಘಟನೆ ಕೋಲಾರ (Kolar) ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ನಡೆದಿದೆ. ಬೆಳ್ಳಂಬೆಳಗ್ಗೆ ಕುಡಿದುಕೊಂಡು ಬಂದಿದ್ದ ವ್ಯಕ್ತಿ ಪ್ರತಿಭಟನೆ ಮಾಡುವವರ ಮಧ್ಯೆ ಕುಳಿತು ಗಲಾಟೆ ಮಾಡಿದ್ದಾನೆ. ಆತನನ್ನು ಅಲ್ಲಿಂದ ತೆರಳುವಂತೆ ಸೂಚಿಸಿದರೂ ಆತ ತೆರಳದೇ ಗಲಾಟೆ ಮಾಡಿದ್ದಾನೆ.  ಏಯ್, ನಾನು ರೈತನ ಮಗನೇ ಸುಮ್ನೆ ಕೂತ್ಕೋ ಎಂದು ಕುಡುಕ ತಿರುಗೇಟು ನೀಡಿದ್ದಾನೆ.!

ಭಾರತ್‌ ಬಂದ್‌: ಪ್ರಧಾನಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ಪ್ರತಿಭಟನೆ

ನಿನ್ನ ಪಾಡಿಗೆ ನೀನು ಪ್ರತಿಭಟನೆ ಮಾಡು ಎಂದು ಕುಡುಕ ಆವಾಜ್ ಹಾಕಿದ್ದು, ಪೊಲೀಸರು (Police) ಮಧ್ಯೆ ಪ್ರವೇಶಿಸಿದಾಗ ಅವರ ಜೊತೆಯೂ ಕುಡುಕನಿಂದ ಮಾತಿನ ಚಕಮಕಿ ನಡೆದಿದೆ.