ಕೈಗೆಟುಕದ ಮದ್ಯ, ಸ್ಯಾನಿಟೈಸರ್‌ ಕುಡೀತಿದ್ದಾರಾ ಎಣ್ಣೆ ಪ್ರಿಯರು?

ಮದ್ಯ ಸಿಗದೆ ಸ್ಯಾನಿಟೈಸರ್ ಕುಡೀತಿದ್ದಾರಾ ಕುಡುಕರು? ಹುಬ್ಬಳ್ಳಿಯಲ್ಲಿ ಪತ್ತೆಯಾಯ್ತು ರಾಶಿ ರಾಶಿ ಸ್ಯಾನಿಟೈಸರ್ ಬಾಟಲ್| ಉಗಾರ್‌ ಶುಗರ್ ಹೆಸರಿನ ಸ್ಯಾನಿಟೈಸರ್‌ಗೆ ಹೆಚ್ಚಿದ ಬೇಡಿಕೆ
First Published Apr 16, 2020, 1:42 PM IST | Last Updated Apr 16, 2020, 1:44 PM IST

ಹುಬ್ಬಳ್ಳಿ(ಏ.16): ಸದ್ಯ ದೇಶದಾದ್ಯಂತ ಹೇರಲಾಗಿರುವ ಲಾಕ್‌ಡೌನ್‌ನಿಂದ ಮದ್ಯಪ್ರಿಯರಿಗೆ ತೀವ್ರ ಸಂಕಟ ಸನುಭವಿಸುತ್ತಿದ್ದಾರೆ. ಅನೇಕ ಮಂದಿ ಮದ್ಯ ಸಿಗದೇ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಹೀಗಿರುವಾಗ ಎಣ್ಣೆ ಸಿಗದೇ, ಸ್ಯಾನಿಟಟೈಸರ್ ಖರೀದಿಸಿ ಸೇವಿಸ್ತಿದ್ದಾರಾ? ಎಂಬ ಅನುಮಾನವೊಂದು ಮನೆ ಮಾಡಿದೆ.

ಪತಿ ಕೊರೋನಾ ವಿಚಾರ ಮುಚ್ಚಿಟ್ಟ ಗರ್ಭಿಣಿಗೂ ಪಾಸಿಟಿವ್: ಲೋಟಸ್ ಆಸ್ಪತ್ರೆ ಸುತ್ತ ಆತಂಕ

ಹೌದು ಹುಬ್ಬಳ್ಳಿಯ ತೊರವಿ ಹಕ್ಕಲ್‌ನಲ್ಲಿ ರಾಶಿ ರಾಶಿ ಸ್ಯಾನಿಟೈಸರ್ ಬಾಟಲಿ ಪತ್ತೆಯಾಗಿವೆ. 30 ರೂಪಾಯಿ ಉಗಾರ ಶುಗರ್ ಹೆಸರಿನ ಈ ಸ್ಯಾನಿಟೈಸರ್‌ನಲ್ಲಿ ಶೇ. 80ರಷ್ಟು ಆಲ್ಕೋಹಾಲ್‌ ಅಂಶ ಇರುವುದು ಪತ್ತೆಯಾಗಿದೆ.

ಇನ್ನು ಈ ಬಾಟಲಿ ನೋಡಲು ಮದ್ಯ ಬಾಟಲ್‌ನಂತೆಯೇ ಕಂಡು ಬಂfದಿದ್ದು, ಇದನ್ನು ಮದ್ಯ ಎಂದು ಬಾವಿಸಿ ಕುಡಿದಿದ್ದಾರಾ? ಎಂಬ ಶಂಕೆಯೂ ಎದುರಾಗಿದೆ. ಸದ್ಯ ಈ ಬಾಟಲಿ ಪ್ತೆಯಾದ ಸ್ಥಳವನ್ನು ಸ್ವಚ್ಛಗೊಳಿಸಿರುವ ಪಾಲಿಕೆ ಅಧಿಕಾರಿಗಳು ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.