ಪತಿ ಕೊರೋನಾ ವಿಚಾರ ಮುಚ್ಚಿಟ್ಟ ಗರ್ಭಿಣಿಗೂ ಪಾಸಿಟಿವ್: ಲೋಟಸ್ ಆಸ್ಪತ್ರೆ ಸುತ್ತ ಆತಂಕ

ಆತಂಕ ಸೃಷ್ಟಿಸಿ ಕುರುಬನಹಳ್ಳಿ ಕೊರೋನಾ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾಗಿದೆ ಮಹಿಳೆಗೂ ಕೊರೋನಾ ಸೋಂಕಿರುವುದು ದೃಢವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯ ಹೆರಿಗೆ ಮಾಡಿಸಿದ ವೈದ್ಯರು ಹಾಗು ಸಿಬ್ಬಂದಿಗೂ ಕ್ವಾರೆಂಟೈನ್ ವಿಧಿಸಲಾಗಿದೆ. ಈ ಮೂಲಕ ಕೊರೋನಾದಿಂದಾಗಿ ಬೆಂಗಳೂರಿನಲ್ಲಿ 2 ಆಸ್ಪತ್ರೆ ಸೀಲ್ಡ್‌ಡೌನ್ ಆಗಿದೆ.
 
First Published Apr 16, 2020, 1:35 PM IST | Last Updated Apr 16, 2020, 1:35 PM IST

ಬೆಂಗಳೂರು(ಏ.16): ಆತಂಕ ಸೃಷ್ಟಿಸಿ ಕುರುಬನಹಳ್ಳಿ ಕೊರೋನಾ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾಗಿದೆ ಮಹಿಳೆಗೂ ಕೊರೋನಾ ಸೋಂಕಿರುವುದು ದೃಢವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯ ಹೆರಿಗೆ ಮಾಡಿಸಿದ ವೈದ್ಯರು ಹಾಗು ಸಿಬ್ಬಂದಿಗೂ ಕ್ವಾರೆಂಟೈನ್ ವಿಧಿಸಲಾಗಿದೆ. ಈ ಮೂಲಕ ಕೊರೋನಾದಿಂದಾಗಿ ಬೆಂಗಳೂರಿನಲ್ಲಿ 2 ಆಸ್ಪತ್ರೆ ಸೀಲ್ಡ್‌ಡೌನ್ ಆಗಿದೆ.

ಡೆಲಿವರಿ ನಂತರ ಪತಿ ಕೊರೋನಾ ಪಾಸಿಟಿವ್ ಎಂಬುದನ್ನು ಬಹಿರಂಗ ಪಡಿಸಿದ ಮಹಿಳೆಗೂ ಕೊರೋನಾ ಸೋಂಕು ಇರುವುದು ದೃಢವಾಗಿದೆ. ಸೋಂಕಿರುವುದು ಖೀಚಿತವಾದ ಕೂಡಲೇ ತಾಯಿ ಮಗುವನ್ನು ಬೌರಿಂಗ್‌ಗೆ ದಾಖಲಿಸಲಾಗಿದೆ.

ಲೋಟಸ್ ಆಸ್ಪತ್ರೆ ಸೀಲ್ಡ್‌ಡೌನ್: 7 ಜನ ಡಾಕ್ಟರ್ಸ್‌ಗೆ ಕ್ವಾರೆಂಟೈನ್

ಆಸ್ಪತ್ರೆಗೆ ಬೀಗ ಹಾಕಿ ಆಸ್ಪತ್ರೆ ಆವರಣದಲ್ಲಿ ಔಷಧ ಸಿಂಪಡಣೆ ಮಾಡಲಾಗಿದೆ. ಇದೀಗ ಅನಿವಾರ್ಯವಾಗಿ 5 ದಿನದ ಮಗುವನ್ನು ತಾಯಿಯಿಂದ ದೂರ ಇಡಲಾಗಿದೆ. ರೆಸಿಡೆನ್ಶಿಯಲ್ ಏರಿಯಾದಲ್ಲಿ ಮನೆ ಇರುವುದರಿಂದ ಆತಂಕ ಹೆಚ್ಚಾಗಿದೆ.