Asianet Suvarna News Asianet Suvarna News

ಕೋಲಾರದ ಕುಡುಕನ 'ಗುಂಡಿ'ಗೆ, ಜೀವಂತ ಹಾವನ್ನೇ ಕಚ್ಚಿ ಕಚ್ಚಿ ತಿಂದ!

May 5, 2020, 6:08 PM IST

ಕೋಲಾರ(ಮೇ 05) ಕರ್ನಾಟಕದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದೆ ಒಂದಾದ ಮೇಲೆ ಒಂದು ಸುದ್ದಿ ಬರುತ್ತಿದೆ.  ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬ ಮದ್ಯ ಕುಡಿದು ವಾಹನ ಚಲಾಯಿಸಿ ಪ್ರಾಣ ಕಳೆದುಕೊಂಡಿದ್ದರು.

ಪುರುಷತ್ವ ಹೆಚ್ಚಿಸಿಕೊಳ್ಳಲು ಸ್ನೇಕ್ ವೈನ್, ಕಿಮ್ ಉಪಾಯ

ಈಗ ಕೋಲಾರದ ಲಕತೆ,  ಕೋಲಾರದಲ್ಲಿ ಕುಡಿದ ಮತ್ತಿನಲ್ಲಿ ಹಾವನ್ನ ಕಚ್ಚಿ ಸಾಯಿಸಿದ್ದಾನೆ ಈ ಪುಣ್ಯಾತ್ಮ .  ಕೋಲಾರದ ಮುಳಬಾಗಿಲು ತಾಲೂಕಿನ ಮುಷ್ಟೂರಿನಲ್ಲಿ ಘಟನೆ ನಡೆದಿದ್ದು  ಸಾರಾಯಿ ನಶೆಯಲ್ಲಿ ಹಾವನ್ನ ಕಚ್ಚಿ ಕಚ್ಚಿ ಸಾಯಿಸಿದ್ದಾನೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

ಕುಡಿದು ಗಾಡಿಯಲ್ಲಿ ಹೋಗುತ್ತಿದ್ದಾಗ ಹಾವು  ಅಡ್ಡ ಬಂದಿದೆ.  ದಾರಿಯಲ್ಲಿ ನಿಲ್ಲಿಸಿಕೊಂಡು ಹಾವನ್ನು ಕೈಗೆ ಎತ್ತಿಕೊಂಡ ಭೂಪ ಕಚ್ಚಿ ಕಚ್ಚಿ ಸಾಯಿಸಿದ್ದಾನೆ.