ಕಿಮ್ ಕಾಮಾಸಕ್ತಿ ಹೆಚ್ಚಿಸಿಕೊಳ್ಳಲು ಹೀಗ್ ಮಾಡುತ್ತಿದ್ದನಂತೆ !
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅನಾರೋಗ್ಯದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇದೆ. ಅವನ ಹುಚ್ಚಾಟ, ಜೀವನಶೈಲಿ, ಸರ್ವಾಧಿಕಾರಿ ಧೋರಣೆ, ದೇಶಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ನಿರ್ಧಾರಗಳು ಎಲ್ಲವೂ ಜನರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸುತ್ತವೆ. ವಿಪರೀತ ಹುಡುಗಿಯರ ಹುಚ್ಚಿರುವ ಈತನಿಗೆ ವೈರಿ ರಾಷ್ಟ್ರವನ್ನು ನ್ಯೂಕ್ಲಿಯರ್ ಅಣ್ವಸ್ತ್ರದಿಂದ ಮುಗಿಸಬೇಕೆಂಬ ತವಕ. ಜೊತೆಗೆ ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಲು ಹಾವಿನ ವೈನ್ ಕುಡಿಯುವ ಬಯಕೆ. ಎಷ್ಟು ಬಗೆದರೂ ಮುಗಿಯದ ಕಿಮ್ ಬಗ್ಗೆ ಮತ್ತೊಂದಿಷ್ಟು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ. ಇವು ವಿಶ್ವದ ನಾನಾ ರಾಷ್ಟ್ರಗಳ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದು. ಆದರೆ, ಯಾವತ್ತೂ ಗುಟ್ಟು ರಟ್ಟಾಗದಂತೆ ನೋಡಿಕೊಳ್ಳುವ ಇವುಗಳಲ್ಲಿ ಎಷ್ಟು ಸತ್ಯವೋ, ಎಷ್ಟು ಸುಳ್ಳೋ ಗೊತ್ತಿಲ್ಲ...
2011ರ ಉತ್ತರ ಕೊರಿಯಾ ಆಳುತ್ತಿದ್ದ ಕಿಮ್ ಜಾಂಗ್ ಮೃತನಾದ ನಂತರ ಕಿಮ್ ಜಾಂಗ್ ಉನ್ ಅಧಿಕಾರಕ್ಕೆ ಬಂದ. ತಂದೆಯ ಮೂರನೇ ಪತ್ನಿಗೆ ಈತ ಜನವರಿ 8, 1982ರಂದು ಜನಿಸಿದ.
ಸ್ವಿಸ್‌ನಲ್ಲಿ ಶಿಕ್ಷಣ ಪೂರೈಸಿದ ಕಿಮ್ ಉತ್ತರ ಕೊರಿಯಾದ ಅಧಿಕಾರದ ಹೊಣೆ ಹೊತ್ತಾಗ ಇನ್ನೂ 29 ವರ್ಷದ ಯುವಕ. ಜರ್ಮನ್ ಹಾಗೂ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರ.
ಎಲ್ಲವೂ ಪರ್ಫೆಕ್ಟ್ ಆಗಿರಬೇಕೆಂದು ಬಯಸುತ್ತಿದ್ದ ಕಿಮ್‌ಗೆ ಬ್ಯಾಸ್ಕೆಟ್ ಬಾಲ್ ಹುಚ್ಚಿತ್ತು. ಬೆಲೆ ಬಾಳುವ ಶೂಸ್ ಕಲೆಕ್ಷನ್ ಇತ್ತು ಇವನ ಬಳಿ. ತುಸು ಕೆಟ್ಟ ಹುಡುಗನೆಂದೂ ಕುಖ್ಯಾತಿ ಪಡೆದಿದ್ದ. ಹುಡುಗಿಯರ ವಿಷಯದಲ್ಲಿ ಮುಂದುವರಿಯಲು ಸದಾ ವಿಫಲನಾಗುತ್ತಿದ್ದ.
ಇವನ ಅಣ್ಣನಿಗೆ ಉತ್ತರ ಕೊರಿಯಾದ ಜವಾಬ್ದಾರಿ ಸಿಗುತ್ತೇ ಎಂದೇ ನಂಬಲಾಗಿತ್ತು. ಬದಲಾದ ಪರಿಸ್ಥಿತಿಯಲ್ಲಿ ಈತ ಅಧಿಕಾರ ವಹಿಸಿಕೊಂಡಿದ್ದೇ, ಕೊಂಡಿದ್ದು ಆಗಿನ ಪತ್ರಿಕೆಗಳು ಇವನನ್ನು ಹಾಡಿ ಹೊಗಳಿದ್ದವು.
ಈತನಿಗೊಂದು ಸದಾ ಅಭದ್ರತಾ ಭಾವ ಕಾಡುತ್ತಿತ್ತು. ಇವನ ದೇಶದ ಮೇಲೆ ಯಾರು ಬೇಕಾದರೂ ದಾಳಿ ಮಾಡಬಹುದೆಂಬ ಭಯ ಈತನನ್ನು ಕಾಡುತ್ತಿತ್ತು. ಅದಕ್ಕೆ ಸಶಕ್ತ ಅಣ್ವಸ್ತ್ರ ದೇಶವಾಗುವುದೊಂದೇ ಈತನ ಜೀವನದ ಬಹಳ ದೊಡ್ಡ ಗುರಿಯಾಯಿತು.
ಸೋಡಿಯಂ ಹೆಚ್ಚಿರುವ ಮೀನು ಹಾಗೂ ಫಾಸ್ಟ್ ಫುಡ್ ಎಂದರೆ ಈತ ಪ್ರಾಣ ಬಿಡುತ್ತಿದ್ದ. ಸೋಡಿಯಂ ಹೆಚ್ಚಿರುವ ಆಹಾರ ಸೇವಿಸಿದರೆ ಸಹಜವಾಗಿ ಕಾಡುವ ಹೈ ಬಿಪಿ ಹಾಗೂ ಮಧುಮೇಹಕ್ಕೆ ತುತ್ತಾಗಿದ್ದ ಈತ.
ಅಷ್ಟೇ ಆಗಿದ್ದರೆ ಹೇಗೋ ನಡೆಯುತ್ತಿತ್ತು ಅನ್ಸುತ್ತೆ. ಆದರೆ, ಈತ ಮದ್ಯ ವ್ಯಸನಿಯೂ ಆಗಿದ್ದ. ಅತ್ಯಂತ ಬೆಲೆ ಬಾಳುವ ಫ್ರೆಂಚ್ ಮದ್ಯಗಳು ಈತನಿಗೆ ಇಲ್ಲದಿದ್ದರೆ ಆಗುತ್ತಲೇ ಇರಲಿಲ್ಲ. ಹಾವಿನ ವೈನ್ ಅಂದರೆ ಪಂಚಪ್ರಾಣ ಇವನಿಗೆ. ಈತನ ಯಕೃತ್ ಹಾಳು ಮಾಡಲು ಸಾಕಾಗಿತ್ತು ಈತನ ಕುಡಿತದ ಚಟ.
ತೂಕ ಹೆಚ್ಚಾಗಿದ್ದು ಈತನ ಆರೋಗ್ಯದ ಮೇಲೆ ಸಹಜವಾಗಿಯೇ ಪರಿಣಾಮ ಬೀರಿದ್ದು, ವೈದ್ಯರು ತೂಕ ಇಳಿಸಿಕೊಳ್ಳಲು ಸಲಹೆ ನೀಡಿದ್ದರು. ಈ ಎಲ್ಲ ಕಾರಣಗಳಿಂದ ಕಿಮ್ ಆರೋಗ್ಯ ದಿನದಿಂದ ದಿನಕ್ಕೆ ಕುಂಠಿತವಾಗುತ್ತಾ ಹೋಯಿತು.
ಉತ್ತರ ಕೊರಿಯಾದ ವಾರ್ಷಿಕೋತ್ಸವದಲ್ಲಿ ಕಿಮ್ ಕಾಣಿಸಿಕೊಳ್ಳದೇ ಇರುವುದು, ಈತನ ಆರೋಗ್ಯದ ಬಗ್ಗೆ ಹಲವು ಊಹಾಪೋಹಗಳನ್ನು ಹುಟ್ಟು ಹಾಕಿದೆ.
ಕೆಲವು ಮಾಧ್ಯಮಗಳು ಈತನ ಮೆದುಳು ನಿಷ್ಕ್ರಿಯಗೊಂಡಿದೆ ಎನ್ನುತ್ತಿದ್ದರೆ, ಚೀನಾ ಮೂಲದ ವೈದ್ಯನಿಂದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಇದೀಗ ಕೊರೋನಾ ಸೋಂಕು ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈತನ ಆಹಾರ ಅಭ್ಯಾಸ ವಿಪರೀತ ವಿಚಿತ್ರವಾಗಿರುತ್ತಿತ್ತು. ವೈದ್ಯರು ಇದರ ಬಗ್ಗೆ ಸದಾ ಎಚ್ಚರಿಸುತ್ತಲೇ ಇದ್ದರು. ಆದರೆ, ಕೇಳಬೇಕಲ್ಲ ಈ ಸರ್ವಾಧಿಕಾರಿ. ಸಿಕ್ಕಾಪಟ್ಟೆ ಚೀಸ್ ಸೇವಿಸುತ್ತಿದ್ದ ಈ ದೊರೆ. ದೇಹದಲ್ಲಿ ಕೊಬ್ಬು ಹೆಚ್ಚಾಗಿ ಬಹಳ ಹಿಂದೆಯೇ ಆಸ್ಪತ್ರೆಗೆ ದಾಖಲಾಗಿದ್ದ. ಕೊರಿಯಾ ಮಾಧ್ಯಮಗಳು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಅಷ್ಟೇನೂ ಸೀರಿಯಸ್ ಅಲ್ಲ ಎನ್ನುತ್ತಿವೆ.