ಮಲಪ್ರಭೆ ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ನವಿಲು ರಕ್ಷಣೆ
ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ ಕೊಚ್ಚಿ ಹೋಗ್ತಿದ್ದ ರಾಷ್ಟ್ರಪಕ್ಷಿ ನವಿಲು ರಕ್ಷಣೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಚೊಳಚಗುಡ್ಡ ಸೇತುವೆ ಬಳಿ ಘಟನೆ ನಡೆದಿದೆ.
ಬಾಗಲಕೋಟೆ (ಆ. 19): ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ ಕೊಚ್ಚಿ ಹೋಗ್ತಿದ್ದ ರಾಷ್ಟ್ರಪಕ್ಷಿ ನವಿಲು ರಕ್ಷಣೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಚೊಳಚಗುಡ್ಡ ಸೇತುವೆ ಬಳಿ ಘಟನೆ ನಡೆದಿದೆ.
ಹಲವು ಗಂಟೆಗಳಿಂದ ಪ್ರಾಣ ರಕ್ಷಣೆಗಾಗಿ ನದಿ ಮಧ್ಯದ ಚಿಕ್ಕ ಮರವೇರಿ ಕುಳಿತಿತ್ತು ನವಿಲು. ನೀರಿನ ಪ್ರಮಾಣ ಹೆಚ್ಚಾದಂತೆ ನವಿಲು ಕುಳಿತಿದ್ದ ಮರವೂ ಮುಳುಗ ತೊಡಗಿತು. ನೀರಿನ ರಭಸಕ್ಕೆ ಈಜೋಕೆ ಆಗದೇ ನದಿಯಲ್ಲಿ ಕೊಚ್ಚಿ ಹೋಗ್ತಿದ್ದ ನವಿಲನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ಧಾರೆ.