Asianet Suvarna News Asianet Suvarna News

Diwali 2021: ಕಲರ್‌ಫುಲ್ ಗೂಡುದೀಪ ತಯಾರಿಸ್ತಾರೆ ಉಡುಪಿ ಹೆಣ್ಮಕ್ಕಳು

  • Diwali 2021: ದೀಪಾವಳಿಯಲ್ಲಿ ಈ ಬಾರಿ ಸಾಂಪ್ರದಾಯಿಕ ಗೂಡುದೀಪಗಳಿಗೆ ಭಾರೀ ಬೇಡಿಕೆ 
  • Festival in Udupi: ಚೀನಿ‌ ಗೂಡುದೀಪಗಳಿಗೆ ಸೆಡ್ಡು ಹೊಡೆಯುವ ಸಾಂಪ್ರಾದಾಯಿಕ ಗೂಡುದೀಪ
  • ಪಕ್ಕಾ ಸಾಂಪ್ರದಾಯಿಕ ಶೈಲಿಯ ಈ ಗೂಡುದೀಪಕ್ಕೆ ಸಖತ್ ಡಿಮ್ಯಾಂಡ್

ಉಡುಪಿ(ನ.05): ಆಕಾಶ ಮಾರ್ಗದಲ್ಲಿ ಹೋಗುವ ದೇವರನ್ನು ಬೆಳಕು ನೀಡಿ ಸ್ವಾಗತಿಸುವ ಗೂಡುದೀಪಗಳು ದೀಪಾವಳಿ ಹಬ್ಬದ ಸೊಬಗನ್ನು ಹೆಚ್ಚಿಸುತ್ತವೆ‌. ಇಂತಹಾ ಅಪರೂಪದ ಸಾಂಪ್ರದಾಯಿಕ ಗೂಡುದೀಪ ತಯಾರಿಸುವ ಹೆಣ್ಣು ಮಕ್ಕಳ ಗೂಡುದೀಪ ತಯಾರಿಯ ಒಂದು ಝಲಕ್ ಇಲ್ಲಿದೆ ನೋಡಿ.

Ramanagara: ಪರಿಸರ ಸ್ನೇಹಿ ಹಣತೆಗೆ ಭಾರೀ ಡಿಮ್ಯಾಂಡ್

ಕೆಲವು ವರ್ಷಗಳಿಂದ ಮಾರ್ಕೆಟ್‌ನಲ್ಲಿ ಚೀನಿ‌ ಗೂಡುದೀಪಗಳ ಹಾವಳಿ ಹೆಚ್ಚಿತ್ತು. ಆದ್ರೆ ಚೀನಿ ವಸ್ತುಗಳನ್ನು  ದೇಶಿ ಗೂಡುದೀಪಗಳು ಯಾವಾಗ ಓವರ್ ಟೇಕ್ ಮಾಡೋಕೆ ಶುರು ಮಾಡಿದವೋ ಆವಾಗಲೇ ಸಾಂಪ್ರದಾಯಿಕ ಗೂಡುದೀಪಗಳಿಗೆ ಬೇಡಿಕೆ ಬಂತು ನೋಡಿ. ಇದೇ ಬೇಡಿಕೆ ಅರಿತ ಉಡುಪಿ ಹೆಣ್ಣು ಮಕ್ಳಳ ತಂಡವೊಂದು  ಕಳೆದ ಐದಾರು ವರ್ಷಗಳಿಂದ  ಸಾಂಪ್ರದಾಯಿಕ ಗೂಡುದೀಪಗಳನ್ನು ರೆಡಿ ಮಾಡ್ತಾ ಇದ್ದಾರೆ. ಪಕ್ಕಾ ಸಾಂಪ್ರದಾಯಿಕ ಶೈಲಿಯ ಈ ಗೂಡುದೀಪಕ್ಕೆ ಸಖತ್ ಡಿಮ್ಯಾಂಡ್ ಸ್ರಷ್ಟಿಯಾಗಿದೆ.

Video Top Stories