Asianet Suvarna News Asianet Suvarna News

Ramanagara: ಪರಿಸರ ಸ್ನೇಹಿ ಹಣತೆಗೆ ಭಾರೀ ಡಿಮ್ಯಾಂಡ್

  • ಅಧುನಿಕ ಯಂತ್ರ ಬಳಸದೆ ಕೈಯಲ್ಲೆ ತಯಾರಾಗುವ ಹಣತೆಗಳಿಗೆ(Dia) ಡಿಮ್ಯಾಂಡ್
  • ಮ್ಯಾಜಿಕ್ ದೀಪಾ, ಅಂಬಾರಿ ದೀಪಾ, ನವಿಲು ದೀಪ, ಗಣೇಶ ದೀಪ, ಆನೆ ದೀಪ
  • ಪ್ರವಾಸಿಗರ ಮನ ಸೂರೆಗೊಳ್ಳುವ  ವಿವಿಧ ರೀತಿಯ ನೈಸರ್ಗಿಕ ಮಣ್ಣಿನ ದೀಪಗಳು

ದೀಪಾವಳಿ ಹಬ್ಬ ಬಂತ್ತು ಅಂದ್ರೆ ಪಟಾಕಿ ಸದ್ದು ಕೇಳಿಸುತ್ತದೆ. ಅದೇ ರೀತಿ ಮನೆಗಳ ಮುಂದೆ ಮಣ್ಣಿನ ಹಣತೆಗಳನ್ನ ಬೆಳಗಿಸುವುದು ವಾಡಿಕೆ. ರಾಮನಗರದ ಜಾನಪದ ಕಲೆಗಳ ತವರು ಜಾನಪದ ಲೋಕದಲ್ಲಿ ಅನೂಸುಯ ಬಾಯಿ ಬಹಳ ವರ್ಷಗಳಿಂದ ವಿವಿಧ ಬಗೆಯ ಮಣ್ಣಿನ ಹಣತೆಗಳನ್ನ ಸಿದ್ದಪಡಿಸುತ್ತಾ ಬರುತ್ತಿದ್ದಾರೆ. ಪ್ರತಿ ಮನೆಗಳಲ್ಲಿ ಬೆಳಕು ಚೆಲ್ಲುವ ಸಾಂಪ್ರದಾಯಿಕ ಹಣತೆಗಳನ್ನು ತಲತಲಾಂತರದಿಂದ ತಯಾರಿಸುತ್ತ ಬರುತ್ತಿದ್ದಾರೆ. ಜಾನಪದ ಲೋಕದಲ್ಲಿ ಅನುಸೂಯಮ್ಮ ತಯಾರು ಮಾಡುವ ಮಣ್ಣಿನ ದೀಪಗಳಿಗೆ ದೀಪಾವಳಿ ಬಂದರೆ ಎಲ್ಲಿಲ್ಲದ ಬೇಡಿಕೆ ಶುರುವಾಗುತ್ತೆ.  ಇವರು ಬಗೆ ಬಗೆಯ ಮಣ್ಣಿನ ಹಣತೆಗಳನ್ನು ಸುಲಲಿತವಾಗಿ ತಯಾರು ಮಾಡುತ್ತಾರೆ. ಪೂರ್ವಿಕರ ಕಲೆದಿಂದ ಬಳುವಳಿವಾಗಿ ಬಂದ ಈ ಕುಂಬಾರಿಕೆ ಕಲೆಯನ್ನ ಇವರು 43 ವರ್ಷಗಳಿಂದಲೂ‌ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. 

ಹಣತೆಗೆ ಚಂದದ ಚಿತ್ತಾರ, ವಿದ್ಯಾರ್ಥಿನಿಯ ಬಣ್ಣದ ಹಣತೆಗಳಿಗೆ ಭಾರೀ ಡಿಮ್ಯಾಂಡ್!

 ಅಂದಹಾಗೇ ಬೆಳಕಿನ ಹಬ್ಬ ದೀಪಾವಳಿ ಬಂದಾಗ ಇಲ್ಲಿನ ನೈಸರ್ಗಿಕ ಮಣ್ಣಿನ ಹಣತೆಗಳಿಗೆ ಭಾರಿ ಬೇಡಿಕೆ. ರಾಜ್ಯದ ವಿವಿದೆಡೆಯಿಂದ ಜಾನಪದ ಲೋಕಕ್ಕೆ ಬರುವ ಪ್ರವಾಸಿಗರು ಅನುಸೂಯಮ್ಮ ತಯಾರು ಮಾಡುವ ಹಣತೆಗಳನ್ನು ಕೊಳ್ಳುತ್ತಾರೆ. ಇದಲ್ಲದೆ ಆಂದ್ರ, ತಮಿಳುನಾಡು, ಕೇರಳ ಸೇರಿದಂತೆ ವಿವಿದ ರಾಜ್ಯಗಳಿಗು ರಪ್ತು ಆಗುತ್ತವೆ. ಅನುಸೂಯಮ್ಮ ಅವರ ಕೈಯಲ್ಲಿ ಅರಳುವ  ಮ್ಯಾಜೀಕ್ ದೀಪಾ, ಅಂಬಾರಿ ದೀಪಾ, ನವಿಲು ದೀಪ, ಗಣೇಶ ದೀಪ, ಆನೆ ದೀಪ, ನವ ದೀಪ, ಮಡಿಲು ದೀಪ, ಲಕ್ಷ್ಮಿ ದೀಪ,  ಹೀಗೆ ಹಲವಾರು ಬಗೆ ಬಗೆಯ ಹಣತೆಗಳು ಪ್ರವಾಸಿಗರ ಮನ ಸೂರೆಗೊಳ್ಳಿತ್ತಿವೆ ಅಲ್ಲದೇ ಅವರ ಮನೆ ಬೆಳಗುತ್ತಿವೆ.

Video Top Stories