ಜಿಪಿಆರ್‌ನಲ್ಲೂ ಇಲ್ಲ, ಗುಂಡಿ ಅಗೆದ್ರೂ ಸಿಗಲಿಲ್ಲ, 13ನೇ ಪಾಯಿಂಟ್‌, 13ನೇ ದಿನವೂ ಸಿಗಲಿಲ್ಲ ಕಳೇಬರ!

ಅನಾಮಿಕ ವ್ಯಕ್ತಿ ನೀಡಿದ 13ನೇ ಸ್ಥಳದಲ್ಲಿ ಅಸ್ಥಿಪಂಜರ ಪತ್ತೆಯಾಗಿಲ್ಲ. ಜಿಪಿಆರ್ ಶೋಧ ಮತ್ತು 18 ಅಡಿ ಅಗೆದರೂ ಯಾವುದೇ ಅವಶೇಷಗಳು ಸಿಕ್ಕಿಲ್ಲ. ಎಸ್ಐಟಿ ತನಿಖೆ ಮುಂದುವರೆದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಆ.13): ಮತ್ತೊಮ್ಮೆ ಅನಾಮಿಕನ ಅಂದಾಜು ಹುಸಿಯಾಗಿದೆ. ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ 13ನೇ ಪಾಯಿಂಟ್‌ನಲ್ಲೂ ಅಸ್ಥಿಪಂಜರ ಸಿಕ್ಕಿಲ್ಲ. ಜಿಪಿಆರ್‌ ಶೋಧದಲ್ಲೂ ಕಳೇಬರ ಪತ್ತೆಯಾಗಿಲ್ಲ. ದಿನವಿಡೀ ಕಾರ್ಯಾಚರಣೆ ಆದರೂ ಒಂದು ಚಿಕ್ಕ ಸಾಕ್ಷ್ಯ ಕೂಡ ಸಿಕ್ಕಿಲ್ಲ. ಜಿಪಿಆರ್‌ ಶೋಧಧ ಬಳಿಕ, 18 ಅಡಿ ಅಗೆದರೂ ಯಾವುದೇ ಅವ‍ಶೇಷ ಸಿಕ್ಕಿಲ್ಲ.

ಮಂಗಳವಾರ ಬೆಳಗ್ಗೆ 10.30ಕ್ಕೆ ಎಸ್‌ಐಟಿ ಕಚೇರಿಗೆ ಅನಾಮಿಕ ಆಗಮಿಸಿದ್ದರೆ, ಒಂದು ಗಂಟೆಯ ನಂತರ ಸ್ಥಳಕ್ಕೆ ಜಿಪಿಆರ್‌ ಯಂತ್ರ ಬಂದಿತ್ತು. 1ನೇ ಸುತ್ತಿನ ಸರ್ವೆ ನಡೆಸಿ GPR ಡ್ರೋನ್ ಲ್ಯಾಂಡ್ ಆಗಿತ್ತು. ಆ ಬಳಿಕ ಎಸ್​ಐಟಿ, ಅನಾಮಿಕ ಸಮ್ಮುಖದಲ್ಲಿ GPR ಸರ್ವೆ ನಡೆದಿತ್ತು.

ಸುಜಾತಾ ಭಟ್ ಅಸಲಿ ಹೆಸರೇ ಬೇರೆ, ಮಗು ತೆಗೆಸಿ ಸೀತಾ ನದಿಗೆ ಬೀಸಾಡಿದ್ದಳು! ಭಾವ ಬಿಚ್ಚಿಟ್ಟರು ಅಸಲಿ ಸತ್ಯ!

ಮಧ್ಯಾಹ್ನದ ವೇಳೆಗೆ ಪ್ರಣವ್​ ಮೊಹಂತಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಎಸ್‌ಐಟಿ ಅಧಿಕಾರಿಗಳಿಗೆ ಮುಖ್ಯಸ್ಥರಿಗೆ ಮಾಹಿತಿ ನೀಡಲಾಗಿತ್ತು. ಸ್ಪಾಟ್​ 13ರ ಮಣ್ಣನ್ನು ಎಫ್‌ಎಸ್‌ಎಲ್‌ ಸಂಗ್ರಹಿಸಿತ್ತು. ಈ ವೇಳೆ ಎನ್‌ಎಚ್‌ಆರ್‌ಸಿ ಅಧಿಕಾರಿಗಳು ಕೂಡ ಆಗಮಿಸಿ ಅದರ ವೀಕ್ಷಣೆ ಆರಂಭಿಸಿದ್ದರು. ಸಂಜೆಯ ವೇಳೆಗೆ ಜಿಪಿಅರ್ ಶೋಧದಲ್ಲೂ ಅಸ್ಥಿಪಂಜರ ಪತ್ತೆಯಾಗಿರಲಿಲ್ಲ. ಸುಳಿವು ಸಿಗದಿದ್ದರೂ ಅನಾಮಿಕ ಹೇಳಿದಂತೆ ಎಸ್‌ಐಟಿ ಅಧಿಕಾರಿ ನೆಲವನ್ನು ಅಗೆಯಲು ಆರಂಭಿಸಿದ್ದರು.

Related Video