ಮಂಗಳವಾರ ಮದ್ಯಪ್ರಿಯರಿಗೆ ಸಿಗುತ್ತಾ ಗುಡ್‌ನ್ಯೂಸ್‌..?

ಮದ್ಯ ಮಾರಾಟ ತಡೆಯಿಂದ ಆರ್ಥಿಕತೆಗೆ ಹೊಡೆತ ಬೀಳುತ್ತಿದ್ದು, ಕ್ಯಾಬಿನೆಟ್‌ನಲ್ಲಿ ಮದ್ಯದಂಗಡಿ ತೆರೆಯುವ ಬಗ್ಗೆ ಚರ್ಚೆ ನಡೆಯಲಿದೆ. ಆರ್ಥಿಕ ಸಂಕಷ್ಟದ ಬಗ್ಗೆ ಅಧಿಕಾರಿಗಳು ಸಿಎಂ ಗಮನಕ್ಕೆ ತಂದಿದ್ದು, ಮದ್ಯ ಮಾರಾಟ ಆರಂಭವಾಗಲಿದೆಯಾ ಎಂದು ಸಂಪುಟದಲ್ಲಿ ನಿರ್ಧಾರವಾಗಲಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಏ.18): ಮಂಗಳವಾರ ಮದ್ಯಪ್ರಿಯರಿಗೆ ಸಿಹಿಸುದ್ದಿ ಸಿಗಲಿದೆಯಾ ಎಂಬ ಮಾತು ಕೆಳಿ ಬರುತ್ತಿದೆ. ಮಾರ್ಗಸೂಚಿಯಲ್ಲಿ ಮೇ 03ರ ತನಕ ಮದ್ಯ ಮಾರಾಟವಿಲ್ಲ ಎನ್ನಲಾಗಿದೆ.

ಆದರೆ ಆರ್ಥಿಕತೆಗೆ ಹೊಡೆತ ಬೀಳುತ್ತಿದ್ದು, ಕ್ಯಾಬಿನೆಟ್‌ನಲ್ಲಿ ಮದ್ಯದಂಗಡಿ ತೆರೆಯುವ ಬಗ್ಗೆ ಚರ್ಚೆ ನಡೆಯಲಿದೆ. ಆರ್ಥಿಕ ಸಂಕಷ್ಟದ ಬಗ್ಗೆ ಅಧಿಕಾರಿಗಳು ಸಿಎಂ ಗಮನಕ್ಕೆ ತಂದಿದ್ದು, ಮದ್ಯ ಮಾರಾಟ ಆರಂಭವಾಗಲಿದೆಯಾ ಎಂದು ಸಂಪುಟದಲ್ಲಿ ನಿರ್ಧಾರವಾಗಲಿದೆ.

20ಕ್ಕೆ ಸಂಪುಟ ಸಭೆ: ಮದ್ಯ ಮಾರಾಟ ಬಗ್ಗೆ ನಿರ್ಧಾರ?

ವಿಧಾನಸೌಧದಲ್ಲಿ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಮದ್ಯ ಮಾರಾಟಕ್ಕೆ ಹೆಚ್ಚಿನ ಒತ್ತಡ ಇರುವ ಕಾರಣ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆಯೂ ಚರ್ಚೆ ನಡೆಯಲಿದೆ.

Related Video