ಬೆಂಗಳೂರಿನಲ್ಲಿ ಬಾಲಕನ ಮೇಲೆ ಡೆಡ್ಲಿ ಡಾಗ್ ಅಟ್ಯಾಕ್: ಹೆಚ್ಚಾಯ್ತು ಬೀದಿ ನಾಯಿಗಳ ಹಾವಳಿ

ಹೈದರಾಬಾದ್‌ ಬೆನ್ನಲ್ಲೇ ಬೆಂಗಳೂರಿನಲ್ಲಿ ಡೆಡ್ಲಿ ಡಾಗ್ ಅಟ್ಯಾಕ್ ಘಟನೆ ನಡೆದಿದೆ. ಸೈಕಲ್‌ನಲ್ಲಿ ಹೋಗುತ್ತಿದ್ದ ಬಾಲಕನಿಗೆ ನಾಯಿ ಅಟ್ಟಿಸಿಕೊಂಡು ಹೋಗಿದೆ. ಭಯಪಟ್ಟು ಬಾಲಕ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ.

First Published Feb 25, 2023, 12:44 PM IST | Last Updated Feb 25, 2023, 12:44 PM IST

ಬೆಂಗಳೂರು (ಫೆ.25): ಹೈದರಾಬಾದ್‌ ಬೆನ್ನಲ್ಲೇ ಬೆಂಗಳೂರಿನಲ್ಲಿ ಡೆಡ್ಲಿ ಡಾಗ್ ಅಟ್ಯಾಕ್ ಘಟನೆ ನಡೆದಿದೆ. ಸೈಕಲ್‌ನಲ್ಲಿ ಹೋಗುತ್ತಿದ್ದ ಬಾಲಕನಿಗೆ ನಾಯಿ ಅಟ್ಟಿಸಿಕೊಂಡು ಹೋಗಿದೆ. ಭಯಪಟ್ಟು ಬಾಲಕ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಂಗಳೂರಿನ ಜೆ.ಪಿ.ಪಾರ್ಕ್‌ ಬಳಿ ಘಟನೆ ನಡೆದಿದೆ. ಸದ್ಯ ವಿಡಿಯೋವನ್ನು ಬಿಬಿಎಂಪಿ ಅಧಿಕಾರಿಗಳಿಗೆ ಟ್ಯಾಗ್ ಮಾಡಲಾಗಿದೆ. ಇನ್ನು ಬಾಲಕನಿಗೆ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿದ್ದು,ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಮನವಿಯನ್ನು ಸಹ ಮಾಡಲಾಗಿದೆ.