ಮೋದಿ ಮತ್ತೊಮ್ಮೆ ಪ್ರಧಾನಿಯಾದ್ರೆ ಸಂವಿಧಾನ ಬದಲಾವಣೆ: ಯತ್ನಾಳ್‌ ಹೇಳಿಕೆಗೆ ಸವದಿ ಟಾಂಗ್‌

ನಮಗೆ ಸಂವಿಧಾನ ಮೇಲೆ ಗೌರವವಿದೆ, ಶ್ರದ್ಧೆಯಿದೆ. ವಿರೋಧ ಪಕ್ಷದವರು ಎಬ್ಬಿಸುವ ಊಹಾಪೋಹಗಳಿಗೆ ಜನತೆ ಕಿವಿಗೊಡಬಾರದು| ಬಸನಗೌಡ ಪಾಟೀಲ್ ಯತ್ನಾಳ್ ವೈಯಕ್ತಿಕ ಹೇಳಿಕೆ, ಪಕ್ಷ, ಸರ್ಕಾರದ್ದಲ್ಲ ಎಂದು ಸ್ಪಷ್ಟಪಡಿಸಿದ ಡಿಸಿಎಂ ಲಕ್ಷ್ಮಣ ಸವದಿ| 

Share this Video
  • FB
  • Linkdin
  • Whatsapp

ಬಾಗಲಕೋಟೆ (ಜೂ.18): ಪ್ರಧಾನಿ ಮೋದಿ ಸಂವಿಧಾನ ಮೇಲೆ ಅತ್ಯಂತ ನಂಬಿಕೆಯಿರುವ ವ್ಯಕ್ತಿಯಾಗಿದ್ದಾರೆ. ಸಂವಿಧಾನ ಬಗ್ಗೆ ಬಹಳ ಬದ್ಧತೆಯಿಂದ ನಡೆದುಕೊಳ್ಳುವವರು ನಮ್ಮ ನಾಯಕರಾಗಿದ್ದಾರೆ. ಸಂವಿಧಾನ ಬದಲಿಸತಕ್ಕಂತಹ ದುರಾಡಳಿತ ಮಾಡುವವರು ನಮ್ಮ ನಾಯಕರಲ್ಲ ಎಂದು ಹೇಳುವ ಮೂಲಕ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಡಿಸಿಎಂ ಲಕ್ಷ್ಮಣ ಸವದಿ ಟಾಂಗ್‌ ಕೊಟ್ಟಿದ್ದಾರೆ.

ದ್ವಿತೀಯ PUC ಪರೀಕ್ಷೆ: ಮಾಸ್ಕ್‌ ಧರಿಸದ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ಬೇಜವಾಬ್ದಾರಿ

ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಸಂವಿಧಾನ ಬದಲಾವಣೆಯಾಗಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಅವರ ವೈಯಕ್ತಿಕ ಹೇಳಿಕೆ, ಪಕ್ಷ, ಸರ್ಕಾರದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಂಬೇಡ್ಕರ್ ಸಂವಿಧಾನದಿಂದಲೇ ಮೋದಿಯವರು ಪ್ರಧಾನಿಯಾಗಿದ್ದು ಎಂದು ಹೇಳಿದ್ದಾರೆ. 

Related Video