ದಾವಣಗೆರೆ: ಆಯುಷ್ಮಾನ್‌ ಕಾರ್ಡ್‌ ವಿತರಿಸದೆ ತಿಪ್ಪೆಗೆಸೆದ ಪೋಸ್ಟ್‌ಮ್ಯಾನ್‌..!

ಪೋಸ್ಟ್‌ಮ್ಯಾನ್ ನಿರ್ಲಕ್ಷ್ಯಕ್ಕೆ ಕಂಗಾಲಾದ ಗ್ರಾಮಸ್ಥರು| ದಾವಣಗೆರೆ ಜಿಲ್ಲೆಯ ಎಲೇಬೇತೂರು ಗ್ರಾಮದಲ್ಲಿ ನಡೆದ ಘಟನೆ| ಪೋಸ್ಟ್‌ಮ್ಯಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು| ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ದಾವಣಗೆರೆ ತಹಶೀಲ್ದಾರ್ ಗಿರೀಶ್| 
 

Share this Video
  • FB
  • Linkdin
  • Whatsapp

ದಾವಣಗೆರೆ(ಆ.22): ಪೋಸ್ಟ್‌ಮ್ಯಾನ್ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಕಂಗಾಲಾದ ಘಟನೆ ಜಿಲ್ಲೆಯ ಎಲೇಬೇತೂರು ಗ್ರಾಮಲದಲಿ ನಡೆದಿದೆ. ಗ್ರಾಮದ ಜನರಿಗೆ ಪೋಸ್ಟ್‌ನಲ್ಲಿ ಬಂದ ಸಾವಿರಾರು ಆಯುಷ್ಮಾನ್ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಿದೇ ಪೋಸ್ಟ್‌ಮ್ಯಾನ್‌ ಕೊಚ್ಚಿಗೆ ಎಸೆದು ಅವಾಂತರ ಸೃಷ್ಟಿಸಿದ್ದಾನೆ. 

ಸುವರ್ಣ ನ್ಯೂಸ್‌ ವರದಿಗೆ ಸ್ಪಂದಿಸಿದ ಸಿಎಂ: ಗ್ರಾಮಸ್ಥರಿಗೆ ತಕ್ಷಣ ಬೋಟ್‌ ವ್ಯವಸ್ಥೆ ಮಾಡಲು ಸೂಚನೆ

ಆಧಾರಕಾರ್ಡ್, ಆಯುಷ್ಮಾನ್ ಕಾರ್ಡ್ ಸೇರಿದಂತೆ ಸರ್ಕಾರದ ವಿವಿಧ ಯೋಜನಾ ಕಾರ್ಡ್‌ಗಳು ಫಲಾನುಭವಿಗಳಿಗೆ ತಲುಪಿಸಿದೇ ಕಸದ ಗುಂಡಿಗೆ ಹಾಕಿದ್ದಾನೆ. ಕಸದ ಗುಂಡಿಯಲ್ಲಿ ಬಿದ್ದಿದ್ದ ಕಾರ್ಡ್‌ಗಳನ್ನು ಆರಿಸಿ ತಂದ ಗ್ರಾಮಸ್ಥರು ಪೋಸ್ಟ್ ಮ್ಯಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Related Video