ಸೋಂಕಿತ ತಂದೆಯನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾಳೆ ಮಗಳು..!

ದೊಡ್ಡಬಳ್ಳಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರು ಸೋಂಕಿತನ ಮಗಳಿಗೆ ತಂದೆಯನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಆಗ ನಾವು ಬಡವರು ಸಾರ್, ಎಲ್ಲಿಗೆ ಕರ್ಕೊಂಡು ಹೋಗ್ಲಿ ಎಂದು ವಿಡಿಯೋ ಮೂಲಕ ಕಣ್ಣೀರಿಟ್ಟಿದ್ದಾಳೆ.

Share this Video
  • FB
  • Linkdin
  • Whatsapp

ದೊಡ್ಡಬಳ್ಳಾಪುರ(ಜು.20): ಕೊರೋನಾ ಸೋಂಕಿಗೆ ತುತ್ತಾಗಿರುವ ತಂದೆಯನ್ನು ಉಳಿಸಿಕೊಳ್ಳಲು ಮಗಳು ಹರಸಾಹಸ ಪಡುತ್ತಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರು ಸೋಂಕಿತನ ಮಗಳಿಗೆ ತಂದೆಯನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಆಗ ನಾವು ಬಡವರು ಸಾರ್, ಎಲ್ಲಿಗೆ ಕರ್ಕೊಂಡು ಹೋಗ್ಲಿ ಎಂದು ವಿಡಿಯೋ ಮೂಲಕ ಕಣ್ಣೀರಿಟ್ಟಿದ್ದಾಳೆ.

ಸಿಎಂ ಬಿಎಸ್‌ವೈ ನೇತೃತ್ವದಲ್ಲಿಂದ ಕೊರೋನಾ ಟಾಸ್ಕ್ ಫೋರ್ಸ್‌ ಸಭೆ

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಕೈಚೆಲ್ಲಿ ಬಿಟ್ಟರೆ ಬಡವರ ಗತಿ ಏನು? ಸರ್ಕಾರಿ ವೈದ್ಯರ ಈ ವರ್ತನೆಗೆ ಬಡ ಕುಟುಂಬ ಬೆಚ್ಚಿಬಿದ್ದಿದೆ. ನಾವು ಬಡವರು ಏಕಾಏಕಿ ಬೇರೆ ಆಸ್ಪತ್ರೆಗೆ ಕರ್ಕೊಂಡು ಹೋಗಿ ಅಂದ್ರೆ ಎಲ್ಲಿಗೆ ಹೋಗೋದು? ನಾವು ನಾಲ್ಕು ಜನ ಹೆಣ್ಣು ಮಕ್ಕಳು, ನಮ್ಮ ಬಳಿ ಹಣವಿಲ್ಲ. ಯಾರಾದ್ರೂ ಸಹಾಯ ಮಾಡಿ ಎಂದು ಸೋಂಕಿತ ವ್ಯಕ್ತಿಯ ಪುತ್ರಿ ಅಳಲನ್ನು ತೋಡಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Related Video