Asianet Suvarna News Asianet Suvarna News

ಮೂಡಬಿದ್ರೆಯಲ್ಲಿ ನೈತಿಕ ಪೊಲೀಸ್‌ಗಿರಿ, ಹಿಂದೂ ಪರ ಕಾರ್ಯಕರ್ತರ ಬಂಧನ

Oct 10, 2021, 3:59 PM IST

ಮಂಗಳೂರು (ಅ. 10): ಮತ್ತೆ ನೈತಿಕ ಪೊಲೀಸ್‌ಗಿರಿಗೆ ದಕ್ಷಿಣ ಕನ್ನಡ ಜಿಲ್ಲೆ ಸಾಕ್ಷಿಯಾಗಿದೆ.  ಮೂಡಬಿದ್ರೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಮುಸ್ಲಿಂ ಯುವತಿಯರನ್ನು ತಡೆದು ಪ್ರಶ್ನಿಸಿದ್ದಾರೆ. ಇಬ್ಬರು ಹಿಂದೂ ಪರ ಕಾರ್ಯಕರ್ತರನ್ನು ಬಂಧಿಸಲಾಗಿದೆ, 

ಒಂದೆರಡು ದಿನದ ಹಿಂದೆ  ಕದ್ರಿ ಠಾಣೆ ವ್ಯಾಪ್ತಿಯ ಶೋರೂಂ ಬಳಿ ಖಾಸಗಿ ಕಾಲೇಜೊಂದರ ಸಮೀಪದಲ್ಲಿ ಯುವ ಜೋಡಿಯೊಂದು ನಿಂತಿತ್ತು. ಈ ವೇಳೆ ದಾಳಿ ನಡೆಸಿದ ಕೆಲವರು ಜೋಡಿಗೆ ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ತಮ್ಮನ್ನು ಥಳಿಸಿದ್ದಾರೆ ಎಂದು ಜೋಡಿ ಕದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಜೋಡಿ ರಾಸಲೀಲೆಯಲ್ಲಿ ತೊಡಗಿದ್ದು, ಬುದ್ಧಿಮಾತು ಹೇಳಿದ್ದೇವೆ. ಹಲ್ಲೆ ನಡೆಸಿಲ್ಲ ಎಂದು ಸಂಘಟನೆಯ ಕಾರ್ಯಕರ್ತರು ಹೇಳಿದ್ದಾರೆ.

Video Top Stories