ನಮಾಜ್‌ ಮಾಡುವ ವೇಳೆ ಕುಸಿದು ಬಿದ್ದು ವ್ಯಕ್ತಿ ಮೃತ್ಯು: ಸಾವಿನ ದೃಶ್ಯ CCTVಯಲ್ಲಿ ಸೆರೆ..!

ನಮಾಜ್‌ ಮಾಡುವ ವೇಳೆ ಕುಸಿದು ಬಿದ್ದು ವ್ಯಕ್ತಿ ಸಾವು| ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಮಸೀದಿಯಲ್ಲಿ ನಡೆದ ಘಟನೆ| ಬೆಳಗಿನ ಜಾವ 4 ಗಂಟೆಯ ವೇಳೆ ನಮಾಜ್‌ ಮಾಡುವ ವೇಳೆ ಕುಸಿದು ಬಿದ್ದು ಸಾವು|

First Published May 29, 2020, 1:42 PM IST | Last Updated May 29, 2020, 1:45 PM IST

ಮಂಗಳೂರು(ಮೇ.29): ನಮಾಜ್‌ ಮಾಡುವ ವೇಳೆ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಮಸೀದಿಯಲ್ಲಿ ನಡೆದಿದೆ. ವ್ಯಕ್ತಿಯ ಸಾವಿನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತರನ್ನ ಕಡಬದ ಕಳಾರ್‌ ನಿವಾಸಿ ಅಬ್ದುಲ್‌ ಖಾದರ್‌ ಎಂದು ಗುರುತಿಸಲಾಗಿದೆ. 

ಯತ್ನಾಳ್ ಅಲ್ಲ, ಕತ್ತಿಯೂ ಅಲ್ಲ, ಬಿಜೆಪಿ ಬಂಡಾಯಕ್ಕೆ ಈ ವ್ಯಕ್ತಿಯೇ ಮೂಲ ಕಾರಣ!

ಮೃತ ಅಬ್ದುಲ್‌ ಖಾದರ್‌ ಅವರು ಪ್ರತಿದಿನ ನಮಾಜ್‌ ಮಾಡಲು ಮಸೀದಿಗೆ ತೆರಳುತ್ತಿದ್ದರು. ಎಂದಿನಂತೆ ಇಂದೂ ಕೂಡ ನಮಾಜ್‌ ಮಾಡಿದ್ದರು.ಅದರೆ ಏಕಾಏಕಿ ಕುಸಿದು ಬಿದ್ದು ಇಹಲೋಕ ತ್ಯಜಿಸಿದ್ದಾರೆ.