Asianet Suvarna News Asianet Suvarna News

ಕರಾವಳಿಯಲ್ಲಿ ಮತ್ತೊಂದು ಚಂಡಮಾರುತ ಭೀತಿ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಕರಾವಳಿ ಜಿಲ್ಲೆಗಳಿಗೆ ಚಂಡಮಾರುತದ ಅಲರ್ಟ್ ನೀಡಲಾಗಿದೆ. ನಾಲ್ಕು ದಿನಗಳ ನಿರಂತರ ಮಳೆಯ ಎಚ್ಚರಿಕೆ ಹಿನ್ನೆಲೆಯಲ್ಲಿ ಮುಂಜಾಗೃಕತವಾಗಿ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಸಿದೆ. ಮೀನಿನ ಬೇಟೆಗೆ ಹೋಗಿದ್ದ ಬೋಟುಗಳು ಬಂದರಿಗೆ ವಾಪಸ್ ಆಗುತ್ತಿವೆ.
 

ರಾಜ್ಯದ ಕರಾವಳಿಯ ಎಲ್ಲಾ ಜಿಲ್ಲೆ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೇ ಬಿಪೊರ್ ಜಾಯ್ ಚಂಡಮಾರುತದ ಬಳಿಕ ಕರಾವಳಿ ಜಿಲ್ಲೆಗಳಿಗೆ ಮತ್ತೊಂದು ಚಂಡಮಾರುತದ(Cyclone) ಭೀತಿ ಎದುರಾಗಿದೆ.. ಹೀಗಾಗಿ 4 ದಿನಗಳ ಕಾಲ  ಕಡಲಿಗೆ ಇಳಿಯಬಾರದು ಎಂದು ಮೀನುಗಾರರಿಗೆ(Fishermens) ಎಚ್ಚರಿಕೆ ನೀಡಲಾಗಿದೆ. ಕೇಂದ್ರ ಹವಾಮಾನ ಇಲಾಖೆಯ ಸೂಚನೆ ಪ್ರಕಾರ ವಾಯು ಮಾರುತಗಳು ಬಂಗಾಳ ಕೊಲ್ಲಿಯಿಂದ ಅರಬ್ಬಿ ಸಮುದ್ರದತ್ತ ಚಲಿಸುತ್ತಿದ್ದು, ದಕ್ಷಿಣ ಭಾರತದ ತಮಿಳುನಾಡು, ಕೇರಳ, ಕರ್ನಾಟಕದ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ..ಹೀಗಾಗಿ ಬಂದರಿನಲ್ಲಿ ಲಂಗರು ಹಾಕಿರುವ ಬೋಟುಗಳು ಸ್ಥಳದಲ್ಲೇ ತಂಗಿದ್ದು, ಮೀನುಗಾರಿಕೆಗೆ ಹೋಗಿದ್ದ ಬೋಟುಗಳು ವಾಪಸ್ ಆಗುತ್ತಿವೆ. ಇನ್ನು ಜುಲೈ ತಿಂಗಳಲ್ಲಿ ಮೀನು ಹಿಡಿಯಲಾಗದೆ ಕಂಗಾಲಾಗಿದ್ದ ಮೀನುಗಾರರ ದೋಣಿಗಳು  ಮತ್ತೆ ಕಡಲತೀರ ಸೇರುತ್ತಿವೆ. ಉತ್ತಮ ಮೀನುಗಾರಿಕೆಯ ಕನಸು ಹೊತ್ತಿದ್ದ ಯಾಂತ್ರಿಕೃತ ಬೋಟುಗಳು ಕೈಚೆಲ್ಲಿ ಕುಳಿತಿವೆ. ಚಂಡಮಾರುತದಿಂದ ಸಮುದ್ರದ ಅಲೆಗಳ ಎತ್ತರ ಹೆಚ್ಚಾಗಲಿದ್ದು, ಗಾಳಿಯ ವೇಗವು ಗಂಟೆಗೆ 40-45ರಿಂದ 55ಕಿ.ಮೀ. ಇರುವುದರಿಂದ ಸಮುದ್ರ ಪ್ರಕ್ಷುಬ್ಧಗೊಳ್ಳಲಿದೆ.. ಸಾರ್ವಜನಿಕರು, ಪ್ರವಾಸಿಗರೂ ಸಹ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.

ಇದನ್ನೂ ವೀಕ್ಷಿಸಿ:  ಭೀಮಾತೀರದಲ್ಲಿ ಇನ್ನೂ ನಿಲ್ಲದ ಗನ್‌ ಹಾವಳಿ: ಗ್ರಾಮ ಪಂಚಾಯ್ತಿಗೆ ಪಿಸ್ತೂಲ್ ತಂದು ಪಿಡಿಓ ಮೇಲೆ ಹಲ್ಲೆ !

Video Top Stories