ಡಿಕೆಶಿ ಕಾರ್ಯಕ್ರಮದಲ್ಲಿ ಕಟೌಟ್ ರಾಜಕಾರಣ: ಸಿದ್ದು ಅಭಿಮಾನಿಗಳು ಗರಂ ಆಗಿದ್ದೇಕೆ..?

* ಎಲ್ಲೆಲ್ಲೂ ರಾರಾಜಿಸಿದ ಡಿಕೆಶಿ ಬ್ಯಾನರ್, ಕಾಣದ ಸಿದ್ದರಾಮಯ್ಯ ಕಟೌಟ್
* ನೇಕಾರ ಸಮಸ್ಯೆಗಳ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂವಾದ
* ಅಭಿಮಾನಿಗಳ ಆಕ್ಷೇಪದ ಬೆನ್ನಲ್ಲೇ ಸಿದ್ದರಾಮಯ್ಯ ಕಟೌಟ್ ದಿಢೀರ್ ಪ್ರತ್ಯಕ್ಷ 
 

Share this Video
  • FB
  • Linkdin
  • Whatsapp

ಬಾಗಲಕೋಟೆ(ಜು.18): ಬಾಗಲಕೋಟೆ ಜಿಲ್ಲಾ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೋದಕಡೆಯಲ್ಲಾ ಡಿಕೆಶಿ ಬ್ಯಾನರ್ ರಾರಾಜಿಸುತ್ತಿದೆ. ಆದರೆ, ಎಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯನವರ ಕಟೌಟ್ ಮಾತ್ರ ಎಲ್ಲೂ ಕಾಣಿಸುತ್ತಿಲ್ಲ. ಹೌದು, ಜಿಲ್ಲೆಯ ಬನಹಟ್ಟಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನೇಕಾರರ ಜೊತೆಗೆ ಡಿಕೆಶಿ ಸಂವಾದ ಕಾರ್ಯಕ್ರಮ ನಡೆದಿದೆ. ಕಲ್ಯಾಣ ಮಂಟಪದ ಬಳಿ ಸಿದ್ದರಾಮಯ್ಯನವರ ಕಟೌಟ್ ಮಾತ್ರ ಕಾಣಿಸುತ್ತಿಲ್ಲ. ಸಿದ್ದು ಅಭಿಮಾನಿಗಳ ಆಕ್ಷೇಪದ ಬೆನ್ನಲ್ಲೇ ಸಿದ್ದರಾಮಯ್ಯ ಕಟೌಟ್ ದಿಢೀರ್ ಅಂತ ಪ್ರತ್ಯಕ್ಷವಾಗಿದೆ. ಆಕ್ಷೇಪದ ಬಳಿಕ ಕಲ್ಯಾಣ ಮಂಟಪದ ಮುಖ್ಯ ದ್ವಾರದಲ್ಲಿ ಡಿಕೆ ಶಿವಕುಮಾರ್, ಸಿದ್ದು ಬ್ಯಾನರ್ ಹಾಕಲಾಗಿದೆ. ಮಾಧ್ಯಮಗಳ ಮೂಲಕ ಗಮನಿಸಿದ ಕಾರ್ಯಕರ್ತರು ಸಿದ್ದರಾಮಯ್ಯನವರ ಕಟೌಟ್ ತಂದಿಟ್ಟಿದ್ದಾರೆ. 

ದೆಹಲಿಯಿಂದ ವಾಪಸ್ಸಾದ ಬಳಿಕ ರಾಜಕೀಯ ಚಟುವಟಿಕೆ ಬಿರುಸು; ಜು. 26 ಕ್ಕೆ ಶಾಸಕಾಂಗ ಸಭೆ 

Related Video