Chikkamagaluru ಮಹಾಮಳೆಗೆ ತತ್ತರಿಸಿದ ಕಾಫಿ ನಾಡು : ಬೆಳೆದ ಬೆಳೆ ನೀರು ಪಾಲು

ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಎಡೆ ಬಿಡದೆ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ಅನ್ನದಾತರು ಕಂಗಾಲಾಗಿದ್ದಾರೆ. ಕಾಫಿ ಬೆಳೆ ಕೊಳೆತು ನೆಲಕ್ಕೆ ಬೀಳುತ್ತಿದ್ದರೆ ಇನ್ನೊಂದೆಡೆ ಅಡಕೆ ಕೊಯ್ಲು ಮಾಡಲು ಆಗುತ್ತಿಲ್ಲ.  ಕೊಯ್ಲು ಮಾಡಿದ ಅಡಕೆಗಳು ಮಳೆಯ ಅಬ್ಬರದಿಂದ ಒಣಗುತ್ತಿಲ್ಲ. ಇದರಿಂದ ಕೈಗೆ ಬಂದ  ತುತ್ತು ಬಾಯಿಗೆ ಬಾರದೆ ಕಂಗಾಲಾಗಿದ್ದಾರೆ ರೈತ ಸಮುದಾಯ. 

ಯಾವ ಬೆಳೆಯೂ ಕೈಗೆ ಬರುತ್ತಿಲ್ಲ. ಮೆಣಸು, ಈರುಳ್ಳಿ ಆಲೂ ಕೊಳೆಯುತ್ತಿದೆ. ಭತ್ತ, ತೆಂಗು  ನೀರು ಪಾಲಾಗುತ್ತಿವೆ. ವರ್ಷದ ಅನ್ನವೇ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮುಂದಿನ ಬದುಕಿನ ಚಿಂತೆ ರೈತರನ್ನಾವರಿಸಿದೆ. ಎಲ್ಲೆಡೆಯೂ ಭಾರಿ ಮಳೆಯಿಂದ ನೀರು ಹರಿಯುತ್ತಿದೆ

First Published Nov 18, 2021, 10:14 AM IST | Last Updated Nov 18, 2021, 10:54 AM IST

ಬೆಂಗಳೂರು (ನ.18) :  ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಎಡೆ ಬಿಡದೆ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ಅನ್ನದಾತರು ಕಂಗಾಲಾಗಿದ್ದಾರೆ. ಕಾಫಿ ಬೆಳೆ ಕೊಳೆತು ನೆಲಕ್ಕೆ ಬೀಳುತ್ತಿದ್ದರೆ ಇನ್ನೊಂದೆಡೆ ಅಡಕೆ ಕೊಯ್ಲು ಮಾಡಲು ಆಗುತ್ತಿಲ್ಲ.  ಕೊಯ್ಲು ಮಾಡಿದ ಅಡಕೆಗಳು ಮಳೆಯ ಅಬ್ಬರದಿಂದ ಒಣಗುತ್ತಿಲ್ಲ. ಇದರಿಂದ ಕೈಗೆ ಬಂದ  ತುತ್ತು ಬಾಯಿಗೆ ಬಾರದೆ ಕಂಗಾಲಾಗಿದ್ದಾರೆ ರೈತ ಸಮುದಾಯ. 

Chikkamagaluru ಧಾರಾಕಾರ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲು

ಯಾವ ಬೆಳೆಯೂ ಕೈಗೆ ಬರುತ್ತಿಲ್ಲ. ಮೆಣಸು, ಈರುಳ್ಳಿ ಆಲೂ ಕೊಳೆಯುತ್ತಿದೆ. ಭತ್ತ, ತೆಂಗು  ನೀರು ಪಾಲಾಗುತ್ತಿವೆ. ವರ್ಷದ ಅನ್ನವೇ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮುಂದಿನ ಬದುಕಿನ ಚಿಂತೆ ರೈತರನ್ನಾವರಿಸಿದೆ. ಎಲ್ಲೆಡೆಯೂ ಭಾರಿ ಮಳೆಯಿಂದ ನೀರು ಹರಿಯುತ್ತಿದೆ. ಒಟ್ಟಿನಲ್ಲಿ ಕಾಲವಲ್ಲದ ಕಾಲದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಜನರ ಜೀವನವನ್ನೇ ನೀರಿನಲ್ಲಿ ಕೊಚ್ಚಿಕೊಂಡು ಹೊಗುತ್ತಿದೆ.