ಕೊಪ್ಪಳದಲ್ಲಿ ಕೊರೋನಾ ನಿಯಮ ಉಲ್ಲಂಘನೆ, ಅಧಿಕಾರಿಗಳ ಉಪಸ್ಥಿತಿಯಲ್ಲಿಯೇ ನಡೆದ ಜಾತ್ರೆ

ಮಹಾ ರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗಿ| ಅಲ್ಲದೇ ಯಾವುದೇ ಸಾಮಾಜಿಕ ಅಂತರವೂ ಇಲ್ಲ, ಮಾಸ್ಕ್ ಸಹ ಧರಿಸದ ಜನರು| ಕೊಪ್ಪಳ ಜಿಲ್ಲೆಯ ಕನಕಗಿರಿಯ ಕನಕಾಚಲಪತಿ ಜಾತ್ರೆ| 

First Published Apr 4, 2021, 1:27 PM IST | Last Updated Apr 4, 2021, 1:27 PM IST

ಶಿವಮೊಗ್ಗ(ಏ.04): ಕೊರೋನಾ ನಿಯಮಗಳನ್ನ ಉಲ್ಲಂಘಿಸಿದ ಜನರು ಅದ್ಧೂರಿಯಾಗಿ ಜಾತ್ರೆ ಮಾಡಿದ ಘಟನೆ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಇಂದು(ಭಾನುವಾರ) ನಡೆದಿದೆ. ಕನಕಗಿರಿಯ ಕನಕಾಚಲಪತಿ ಜಾತ್ರೆಯ ನಿಮಿತ್ತ ಇಂದು ಬೆಳಗ್ಗೆ ಮಹಾ ರಥೋತ್ಸವ ನಡೆದಿದೆ. 

ಕಳೆದ 6 ತಿಂಗಳಲ್ಲಿ ಮತ್ತೊಮ್ಮೆ ತೀವ್ರ ಏರಿಕೆ ಕಂಡ ಕೊರೋನಾ: ಸಾವಿನ ಸಂಖ್ಯೆ ಹೆಚ್ಚಳ

ಅಧಿಕಾರಿಗಳ ಉಪಸ್ಥಿತಿಯಲ್ಲಿಯೇ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದಾರೆ. ಇಷ್ಟೇ ಅಲ್ಲದೇ ಯಾವುದೇ ಸಾಮಾಜಿಕ ಅಂತರವೂ ಇಲ್ಲ, ಮಾಸ್ಕ್ ಸಹ ಧರಿಸಿಲ್ಲ.  ಜಾತ್ರೆಯಲ್ಲಿ ಉಪವಿಭಾಗಧಿಕಾರಿ ನಾರಾಯಣರೆಡ್ಡಿ, ತಹಶೀಲ್ದಾರ ರವಿ ಅಂಗಡಿ, ದೇವಸ್ಥಾನ ಆಡಳಿತಾಧಿಕಾರಿ ಅರವಿಂದ ಸುತಗುಂಡಿ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ.