ಚಿತ್ರದುರ್ಗ: ಸಚಿವ ಬಿ.ಸಿ.ಪಾಟೀಲ್‌ ಸಮ್ಮುಖದಲ್ಲೇ ಕೋವಿಡ್‌ ರೂಲ್ಸ್‌ ಬ್ರೇಕ್‌..!

*  'ರೈತರೊಂದಿಗೆ ಒಂದು ದಿನ' ಮೇಳ
*  ಚಿತ್ರದುರ್ಗ ಜಿಲ್ಲೆಯ ಐಮಂಗಲ ಗ್ರಾಮದಲ್ಲಿ ಒಂದು ದಿನದ ಕೃಷಿ ಮೇಳ 
*  ಸಚಿವ ಬಿ.ಸಿ.ಪಾಟೀಲ್‌, ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಎತ್ತಿನ ಗಾಡಿಯಲ್ಲಿ ಮೆರವಣಿಗೆ

First Published Sep 11, 2021, 2:52 PM IST | Last Updated Sep 11, 2021, 2:52 PM IST

ಚಿತ್ರದುರ್ಗ(ಸೆ.11):  ಕೃಷಿ ಮೇಳದಲ್ಲಿ ಕೋವಿಡ್‌ ರೂಲ್ಸ್‌ ಬ್ರೇಕ್‌ ಆದ ಘಟನೆ ಜಿಲ್ಲೆಯ ಐಮಂಗಲ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. 'ರೈತರೊಂದಿಗೆ ಒಂದು ದಿನ' ಮೇಳಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಚಾಲನೆ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಐಮಂಗಲ ಗ್ರಾಮದಲ್ಲಿ ಒಂದು ದಿನದ ಕೃಷಿ ಮೇಳ ನಡೆಯುತ್ತಿದೆ. ಸಚಿವ ಬಿ.ಸಿ.ಪಾಟೀಲ್‌, ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರು ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ನೂರಾರು ಮಂದಿ ಸೇರಿದ್ದರು. ಈ ವೇಳೆ ಸಾಮಾಜಿಕ ಅಂತರವೂ ಇಲ್ಲ, ಮಾಸ್ಕ್‌ ಮರೆದತು ನೂರಾರು ಜನರು ಸೇರುವ ಮೂಲಕ ಕೋವಿಡ್‌ ನಿಯಮಗಳನ್ನ ಗಾಳಿಗೆ ತೂರಲಾಗಿದೆ.

ಬೀದರ್‌ನಲ್ಲಿ ಭಾರೀ ಮಳೆ: ಅತಿವೃಷ್ಟಿಗೆ ರೈತ ಕಂಗಾಲು

Video Top Stories