ಕೊರೋನಾಗೆ ಬಲಿ: ಯಾದಗಿರಿಯಲ್ಲೂ ಅಮಾನವೀಯ ಅಂತ್ಯಸಂಸ್ಕಾರ..!

ಕೊರೋನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಶವವನ್ನ ಗುಂಡಿಗೆ ಎಸೆದು ಶವ ಸಂಸ್ಕಾರ| ಯಾದಗಿರಿಯಲ್ಲಿ ನಡೆದ ಘಟನೆ| ಮಾನವೀಯತೆಯನ್ನೇ ಮರೆತ ಆರೋಗ್ಯ ಇಲಾಖೆ ಸಿಬ್ಬಂದಿ| 

First Published Jul 1, 2020, 3:38 PM IST | Last Updated Jul 1, 2020, 3:38 PM IST

ಯಾದಗಿರಿ(ಜು.01): ಮಹಾಮಾರಿ ಕೊರೋನಾ ವೈರಸ್‌ನಿಂದ ಮೃತಪಟ್ಟ ವ್ಯಕ್ತಿಯ ಶವವನ್ನ ಗುಂಡಿಗೆ ಎಸೆದು ಶವ ಸಂಸ್ಕಾರ ಮಾಡಿದ ಘಟನೆ ನಗರದಲ್ಲಿ ಇಂದು(ಬುಧವಾರ) ನಡೆದಿದೆ.ಆರೋಗ್ಯ ಇಲಾಖೆ ಸಿಬ್ಬಂದಿ ಶವವನ್ನ ದರ ದರನೆ ಎಳೆದುಕೊಂಡು ಬಂದು ಗುಂಡಿಯಲ್ಲಿ ಎಸೆದು ಮಣ್ಣು ಮಾಡಲಾಗಿದೆ. 

ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಮೃತ ವೃದ್ಧೆಯ ಶವ ಹೊತ್ತೊಯ್ದ ಬಿಬಿಎಂಪಿ ಸಿಬ್ಬಂದಿ

ಈ ಮೂಲಕ ಯಾದಗಿರಿ ಜಿಲ್ಲೆಯ ಆರೋಗ್ಯ ಇಲಾಖೆ ಸಿಬ್ಬಂದಿ ಮಾನವೀಯತೆಯನ್ನೇ ಮರೆತೆದಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಕೆರೆ ಅಂಗಳದಲ್ಲಿ ಹಳ್ಳ ತೋಡಿ ಶವವನ್ನ ಬಿಸಾಡಿ ಹೋಗಿದ್ದಾರೆ.