ದರ್ಶನ್‌ಗೆ ಮನೆಯೂಟವೋ..ಜೈಲೂಟವೋ..? ಮನೆ ಊಟ ಕೇಳಿ ಸಲ್ಲಿಸಿದ್ದ ಅರ್ಜಿ ತೀರ್ಪು ಜುಲೈ 25ಕ್ಕೆ ಮುಂದೂಡಿಕೆ !

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಜೈಲಿನಲ್ಲಿ ಮನೆಯೂಟ ಅಥವಾ ಜೈಲೂಟ ನೀಡಬೇಕು ಎಂಬ ತೀರ್ಪನ್ನು ಕೋರ್ಟ್‌ ಜುಲೈ 25ಕ್ಕೆ ಕಾಯ್ದಿರಿಸಿದೆ.

Share this Video
  • FB
  • Linkdin
  • Whatsapp

ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy murder case) ಆರೋಪಿ ನಟ ದರ್ಶನ್‌ಗೆ (Darshan) ಜೈಲಿನಲ್ಲಿ ಮನೆಯೂಟ ಅಥವಾ ಜೈಲೂಟ ನೀಡಬೇಕು ಎಂಬ ತೀರ್ಪನ್ನು ಕೋರ್ಟ್‌ ಜುಲೈ 25ಕ್ಕೆ ಕಾಯ್ದಿರಿಸಿದೆ. ಸುದೀರ್ಘ ವಿಚಾರಣೆ ಬಳಿಕ ತೀರ್ಪನ್ನು ಕೋರ್ಟ್‌(Court) ಕಾಯ್ದಿರಿಸಿದೆ. ಹಾಗಾಗಿ ಜುಲೈ 25ರವರೆಗೂ ದರ್ಶನ್‌ಗೆ ಜೈಲೂಟವೇ ಗತಿಯಾಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಾದ-ಪ್ರತಿವಾದ ನಡೆದಿದ್ದು, ಮನೆ ಊಟ ಕೇಳಿ ದರ್ಶನ್ ಸಲ್ಲಿಸಿದ್ದ ಅರ್ಜಿ ತೀರ್ಪು ಜುಲೈ 25ಕ್ಕೆ ಬರಲಿದೆ. ಮನೆ ಊಟ ಬೇಕಾ..? ಬೇಡವಾ ಎಂಬ ಬಗ್ಗೆ ವಾದ-ಪ್ರತಿವಾದ ನಡೆದಿದೆ. 2 ಕಡೆ ವಾದ-ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿದ ಕೋರ್ಟ್. ಜುಲೈ 25ಕ್ಕೆ ನಿರ್ಧಾರವಾಗಲಿದೆ ಮನೆ ಊಟದ ಅರ್ಜಿ ಭವಿಷ್ಯ.

ಇದನ್ನೂ ವೀಕ್ಷಿಸಿ: ಮೋದಿ 3.0 ಸರ್ಕಾರದ ಮೊದಲ ಬಜೆಟ್: ತೆರಿಗೆದಾರರಿಗೆ ಸಿಗುತ್ತಾ ಗುಡ್‌ನ್ಯೂಸ್..? ಯಾವುದೆಲ್ಲಾ ಏರಿಕೆ,ಇಳಿಕೆ..?

Related Video