ರಸ್ತೆಗಳೇ ಮಾಯ - ಆದರೂ ಹಣ ರಿಲೀಸ್..! ನರೇಗಾ ಯೋಜನೆಯಲ್ಲಿ ಭಾರಿ ಅವ್ಯವಹಾರ..!

ತುಮಕೂರಿನ ಹುಲ್ಲೇಕೆರೆ ಪಂಚಾಯ್ತಿಯಲ್ಲಿ ಅವ್ಯವಹಾರ..! 
ಬಡವರ ಕಷ್ಟದಲ್ಲೂ ಹಣ ಕೊಳ್ಳೆ ಹೊಡೆಯುವ ಖದೀಮರು..! 
ಕೆಲಸವೇ ಮಾಡದೇ ಹಣ ರಿಲೀಸ್ ಮಾಡಿಕೊಂಡ ಭೂಪರು..! 

Share this Video
  • FB
  • Linkdin
  • Whatsapp

ಗ್ರಾಮಗಳ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿಗಳನ್ನು ಮಾಡಲಾಗಿದೆ. ಆದ್ರೆ ಇವುಗಳು ಈಗ ಭ್ರಷ್ಟಚಾರದ(Corruption) ಕೂಪಗಳಾಗಿವೆ. ಕೆಲಸವನ್ನೇ ಮಾಡದೇ ಕೋಟ್ಯಾಂತರ ರೂಪಾಯಿ ಹಣವನ್ನು(Money) ರಿಲೀಸ್ ಮಾಡಿಸಿಕೊಂಡಿವೆ ಈ ಗ್ರಾಮ ಪಂಚಾಯಿತಿಗಳು(gram panchayat). ನರೇಗ ಯೋಜನೆಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಈ ಬಾರಿಯ ಕವರ್‌ ಸ್ಟೋರಿಯಲ್ಲಿ ತೋರಿಸಲಾಗುತ್ತಿದೆ. ತುಮಕೂರಿನ(Tumkur) ಹುಲ್ಲೇಕೆರೆ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿದ್ದು, ಕೆಲಸ ಮಾಡದೇ ಹಣವನ್ನು ರಿಲೀಸ್‌ ಮಾಡಲಾಗಿದೆ. ರಸ್ತೆ ಇಲ್ಲದಿದ್ದರೂ, ಹಣ ಬಿಡುಗಡೆಯಾಗಿದೆ. ಹಾಗಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಇದೆಯೋ ಅಥವಾ ಕಣ್ಣು ಮುಚ್ಚಿ ಕುಳಿತಿದೆಯಾ ಎಂಬ ಅನುಮಾನ ಮೂಡಿದೆ. 

ಇದನ್ನೂ ವೀಕ್ಷಿಸಿ: ಅಕ್ರಮ ಗೋ ಮಾಂಸ ಸಾಗಾಟ: ವಾಹನ ತಡೆದು ಬೆಂಕಿ ಇಟ್ಟ ಶ್ರೀರಾಮ ಸೇನೆ ಕಾರ್ಯಕರ್ತರು

Related Video