BIG Impact: ಸಿಎಂ ತವರಲ್ಲಿ ಲಂಚಾವತಾರ, PWD ಅಧಿಕಾರಿ ಕರ್ತವ್ಯದಿಂದ ವಿಮುಕ್ತಿ
- ಸಿಎಂ ತವರಲ್ಲಿ ಲಂಚಾವತಾರಕ್ಕೆ ಶಿಕ್ಷೆಯಾಗಿಯೇ ಬಿಡ್ತು!
- PWD ಇಲಾಖೆಯಲ್ಲಿದ್ದ ಭ್ರಷ್ಟನ ವಿರುದ್ಧ ಹಿರಿಯ ಅಧಿಕಾರಿಗಳಿಂದ ಕ್ರಮ
- ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ಬಿಗ್ ಇಂಪ್ಯಾಕ್ಟ್ !
ಬೆಂಗಳೂರು (ಜು. 16): ಸಿಎಂ ಬಿ.ಎಸ್. ಯಡಿಯೂರಪ್ಪ ತವರು ಶಿವಮೊಗ್ಗ ಜಿಲ್ಲೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರದ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ವರದಿ ಮಾಡಿತ್ತು. ಈಗ ಆ ವರದಿಗೆ ಫಲಶೃತಿ ಸಿಕ್ಕಿದೆ. ಲಂಚಬಾಕ pwd ಇಲಾಖೆಯ ನಗದು ಇಲಾಖೆಯ ಅಧಿಕಾರಿ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಲೋಕೋಪಯೋಗಿ ಇಲಾಖೆಯ ಶಿವಮೊಗ್ಗ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುತ್ತಿದ್ದ ನಗದು ಶಾಖೆ ವಿಭಾಗ ಅಧಿಕಾರಿ ಬಿರೇಂದ್ರ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಜರುಗಿಸಿದ್ದಾರೆ. PWD ಇಲಾಖೆ ಕರ್ತವ್ಯದಿಂದ ವಿಮುಕ್ತಿ ನೀಡಿ ಮಾತೃ ಇಲಾಖೆಗೆ ಹಾಜರಾಗಲು ಅದೇಶ ನೀಡಲಾಗಿದೆ.