ಜನ ಪ್ರಾಮಾಣಿಕರಾದ್ರು...ಕಂತೆ-ಕಂತೆ ಹಣ ರಸ್ತೆಯಲ್ಲಿದ್ದರೂ ಮುಟ್ಟದ ಬೆಂಗ್ಳೂರು ಜನ!

ರಸ್ತೆಯಲ್ಲಿ ಬಿದ್ದಿದ್ದ ನೋಟು ಕಂಡು ಬೆಚ್ಚಿಬಿದ್ದ ವಾಕಿಂಗ್ ಬಂದ ಜನ/  ರಸ್ತೆಯಲ್ಲಿ ನೋಟುಗಳು ಬಿದ್ದಿದ್ದರೂ ಮಟ್ಟಲು ಜನರಿಗೆ ಭಯ/  ಒಂದು ಗಂಟೆ ಕಾಲ‌ ರಸ್ತೆಯಲ್ಲಿದ್ದರೂ ಹಣ ಸೇಫ್/  ನೋಟುಗಳನ್ನು ಮುಟ್ಟಲೂ ಆತಂಕದಿಂದ ದೂರ ಸರಿದ ಜನ

Share this Video
  • FB
  • Linkdin
  • Whatsapp

ಬೆಂಗಳೂರು(ಮೇ 03) ಕೊರೋನಾ ವೈರಸ್ ಜನರನ್ನು ಪ್ರಾಮಾಣಿಕರನ್ನಾಗಿಸಿದೆ. ರಸ್ತೆಯಲ್ಲಿ ನೋಟುಗಳು ಗಂಟೆಗಟ್ಟಲೆ ಬಿದ್ದಿದ್ದರೂ ಜನ ಮುಟ್ಟಿಲ್ಲ! ರಸ್ತೆಯಲ್ಲಿ ಬಿದ್ದಿದ್ದ ನೋಟು ಕಂಡು ಜನರು ಬೆಚ್ಚಿಬಿದ್ದಿದ್ದಾರೆ.

ಒಂದು ಗಂಟೆ ಕಾಲ‌ ರಸ್ತೆಯಲ್ಲಿದ್ದರೂ ಹಣ ಸೇಫ್ ಆಗಿ ಉಳಿದಿದೆ. ಕುಮಾರಪಾರ್ಕ್ ರೈಲ್ವೇ ಸಮಾನಂತರ ರಸ್ತೆಯಲ್ಲಿ ಘಟನೆ ನಡೆದಿದೆ. ನೋಟುಗಳನ್ನ‌ ಉಯಾರು ಜೇಬಿಗೆ ಹಾಕಿಕೊಂಡಿಲ್ಲ ಕಾರಣ ಕೊರೋನಾ ಭಯ . ನೋಟುಗಳಿಂದ‌ ಸೋಂಕು‌ ಹರಡುವ ಭೀತಿಗೆ ಜನ ಹಣ ಮುಟ್ಟಿಲ್ಲ.

ಕಾಲ ಬದಲಾಗಿದೆ, ರಸ್ತೆಯಲ್ಲಿ ಹಣ ಸಿಕ್ಕರೆ ಯಾರಿಗೂ ಬೇಡ

ನಂತರ ಸ್ಥಳಕ್ಕೆ ಆಗಮಿಸಿದ ಶೇಷಾದ್ರಿಪುರಂ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಅಷ್ಟರಲ್ಲಿ ಹಣ ಕಳೆದುಕೊಂಡ ದಂಪತಿ ಬಂದಿದ್ದು ಅವರಿಗೆ ತಲುಪಿಸಲಾಗಿದೆ.

Related Video