ಶಿವಮೊಗ್ಗದಲ್ಲಿ ಕೊರೋನಾ ವಾರಿಯರ್ಸ್‌ಗೂ ವಕ್ಕರಿಸಿದ ಕೋವಿಡ್ 19 ಹೆಮ್ಮಾರಿ..!

ಬೆಂಗಳೂರಿನ ಶಿವಾಜಿನಗರ ಹಾಗೂ ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿದ್ದ 7 KSRP ಪೊಲೀಸರಿಗೆ ಕೊರೋನಾ ಸೋಂಕು ತಗುಲಿದೆ. ಇದೀಗ 12 ವಸತಿಗೃಹಗಳಿದ್ದ KSRP ಅಪಾರ್ಟ್‌ಮೆಂಟ್ ಸೀಲ್‌ಡೌನ್ ಮಾಡಲಾಗಿದೆ. ಈ ಘಟನೆ ಶಿವಮೊಗ್ಗ ಜನರನ್ನು ಬೆಚ್ಚಿಬೀಳಿಸಿರುವುದಂತೂ ಸುಳ್ಳಲ್ಲ.

First Published Jun 1, 2020, 11:34 AM IST | Last Updated Jun 1, 2020, 11:34 AM IST

ಶಿವಮೊಗ್ಗ(ಜೂ.01): ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕೊರೋನಾ ಸೋಂಕಿತರು ಗಣನೀಯ ಪ್ರಮಾಣದಲ್ಲಿ ಗುಣಮುಖರಾಗುತ್ತಿದ್ದರೆ ಮತ್ತೊಂದೆಡೆ ಕೊರೋನಾ ವಾರಿಯರ್ಸ್‌ಗೆ ಡೆಡ್ಲಿ ಹೆಮ್ಮಾರಿ ವಕ್ಕರಿಸಿರುವುದು ಜಿಲ್ಲೆಯ ಜನರ ಆತಂಕಕ್ಕೀಡು ಮಾಡಿಕೊಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನ ಶಿವಾಜಿನಗರ ಹಾಗೂ ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿದ್ದ 7 KSRP ಪೊಲೀಸರಿಗೆ ಕೊರೋನಾ ಸೋಂಕು ತಗುಲಿದೆ. ಇದೀಗ 12 ವಸತಿಗೃಹಗಳಿದ್ದ KSRP ಅಪಾರ್ಟ್‌ಮೆಂಟ್ ಸೀಲ್‌ಡೌನ್ ಮಾಡಲಾಗಿದೆ. ಈ ಘಟನೆ ಶಿವಮೊಗ್ಗ ಜನರನ್ನು ಬೆಚ್ಚಿಬೀಳಿಸಿರುವುದಂತೂ ಸುಳ್ಳಲ್ಲ.

ಇನ್ನು ಕೊರೋನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ್ದ ಆಯನೂರು ಆರೋಗ್ಯ ಕೇಂದ್ರದ ವೈದ್ಯೆಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.  ಸೋಂಕಿತನಿಗೆ ಚಿಕಿತ್ಸೆ ನೀಡಿದ ವೈದ್ಯೆ  ಕೂಡಾ ಕ್ವಾರಂಟೈನ್‌ನಲ್ಲಿದ್ದರು.ಇದೀಗ ಆಯನೂರು ವೈದ್ಯೆ ಕೂಡಾ ಕೊರೋನಾ ದಾಳಿಗೆ ತುತ್ತಾಗಿದ್ದಾರೆ.

ದಾವಣಗೆರೆಯಲ್ಲಿ 6 ಹೊಸ ಕೊರೋನಾ ಕೇಸ್, 17 ಜನ ಗುಣಮುಖ

ಇಷ್ಟುದಿನ ಹೊರರಾಜ್ಯಗಳಿಂದ ಬಂದಂತವರಿಗೆ ಹಾಗೂ ಜನಸಾಮಾನ್ಯರಿಗೆ ಕೊರೋನಾ ಸೋಂಕು ಪತ್ತೆಯಾಗುತ್ತಿತ್ತು. ಆದರೆ ಇದೀಗ ಕೊರೋನಾ ವಾರಿಯರ್ಸ್‌ಗಳಿಗೆ ಸೋಂಕು ದಾಳಿ ಮಾಡಿರುವುದು ಮಲೆನಾಡಿನ ಮಂದಿಯ ನಿದ್ದೆಗೆಡಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.