ಚಿಕ್ಕೋಡಿ ಜಾತ್ರೆಯಲ್ಲಿ ಜನಸ್ತೋಮ.. ಮಾಸ್ಕ್, ಸಾಮಾಜಿಕ ಅಂತರ.. ಹಾಗಂದ್ರೆ ಏನು?

ಒಂದು ಕಡೆ ಮಹಾರಾಷ್ಟ್ರದಲ್ಲಿ ಕೊರೊನಾ ಆತಂಕ ಹೆಚ್ಚಾಗಿದೆ/ ರಾಜ್ಯ ಸರ್ಕಾರ  ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿ ಮಾಡಿದೆ/ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಿ ಎಂದು ಸೂಚಿಸಿದೆ/ ಚಿಕ್ಕೋಡಿ ತಾಲೂಕಿನ ಕೇರುರ ಗ್ರಾಮದಲ್ಲಿ ಗ್ರಾಮ ದೇವತೆಯಾದ ಅರಣ್ಯ ಸಿದ್ದೇಶ್ವರ ಜಾತ್ರೆಯಲ್ಲಿ  ಮಾತ್ರ ಜನಸ್ತೋಮ

First Published Mar 23, 2021, 12:20 AM IST | Last Updated Mar 23, 2021, 12:20 AM IST

ಚಿಕ್ಕೋಡಿ(ಮಾ. 23) ಕೊರೋನಾ ಎರಡನೇ ಅಲೆ ಎದುರಾಗುತ್ತಿದೆ. ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಿ ಎಂದು ಸರ್ಕಾರ ಮತ್ತು ಇಲಾಖೆ ಎಷ್ಟು ಹೇಳಿದರೂ ಜನ ಮಾತ್ರ ತಲೆಗೆ ಹಾಕಿಕೊಂಡಂತೆ ಕಾಣುವುದಿಲ್ಲ.

ನಟ ಸುನೀಲ್ ರಾವ್‌ಗೆ ಕೊರೋನಾ, ಮನೆಯಲ್ಲೇ ಕ್ವಾರಂಟೈನ್

ಚಿಕ್ಕೋಡಿ ತಾಲೂಕಿನ ಕೇರುರ ಗ್ರಾಮದಲ್ಲಿ ಗ್ರಾಮ ದೇವತೆಯಾದ ಅರಣ್ಯ ಸಿದ್ದೇಶ್ವರ ಜಾತ್ರೆಯಲ್ಲಿ  ಮಾತ್ರ ಜನಸ್ತೋಮ ನೆರೆದಿತ್ತು. ಜನರೇ ಕೊರೋನಾಕ್ಕೆ ಆಹ್ವಾನ ನೀಡುತ್ತಿದ್ದಾರೆಯೇ? ಎಂಬ ಪ್ರಶ್ನೆಯೂ ಮೂಡಿದರೆ ಅಚ್ಚರಿ ಏನಿಲ್ಲ.