ನಟ ಸುನೀಲ್ ರಾವ್ ಗೆ ಕೋವಿಡ್ ಪಾಸಿಟಿವ್ / ತಮಗೆ ಕೊರೋನಾ ಪಾಸಿಟಿವ್ ಆಗಿರುವ ಬಗ್ಗೆ ಸೋಷಿಯಲ್ ಮಿಡಿಯಾ ದಲ್ಲಿ ಬರೆದುಕೊಂಡ‌ ಸುನೀಲ್/ ಎಕ್ಸ್ ಕ್ಯೂಸ್ ಮಿ ಸಿನಿಮಾ ಖ್ಯಾತಿಯ ನಟ ಸುನೀಲ್ ರಾವ್ / ಸದ್ಯ ಶ್ರೀನಿ ನಿರ್ದೇಶನದ ಓಲ್ಡ್ ಮಾಂಕ್ ಚಿತ್ರದಲ್ಲಿ ಅಭಿನಯ ಮಾಡ್ತಿರೋ ನಟ / ಮನೆಯಲ್ಲಿಯೇ ಫ್ಯಾಮಿಲಿ ಜೊತೆ ಕ್ವಾರಂಟೈನ್ ಆಗಿರೋ ನಟ

ಬೆಂಗಳೂರು(ಮಾ. 22) ಕೊರೋನಾ ಎರಡನೇ ಅಲೆ ಆತಂಕ ಹೆಚ್ಚಾಗುತ್ತಲೇ ಇದೆ. ಸ್ಯಾಂಡಲ್ ವುಡ್ ನಟ, ಗಾಯಕ ಸುನೀಲ್ ರಾವ್ ಗೆ ಕೋವಿಡ್ ಪಾಸಿಟಿವ್ ಬಂದಿದ್ದು ಅವರೇ ಸೋಶಿಯಲ್ ಮೀಡಿಯಾ ಮುಖೇನ ವಿಚಾರ ತಿಳಿಸಿದ್ದಾರೆ.

ತಮಗೆ ಕೊರೋನಾ ಪಾಸಿಟಿವ್ ಆಗಿರುವ ಬಗ್ಗೆ ಸೋಷಿಯಲ್ ಮಿಡಿಯಾ ದಲ್ಲಿ ಬರೆದುಕೊಂಡ‌ ಸುನೀಲ್ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಎಕ್ಸ್ ಕ್ಯೂಸ್ ಮಿ ಸಿನಿಮಾ ಖ್ಯಾತಿಯ ನಟ ಸುನೀಲ್ ರಾವ್ ಸದ್ಯ ಶ್ರೀನಿ ನಿರ್ದೇಶನದ ಓಲ್ಡ್ ಮಾಂಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದರು. ಗಾಯಕರಾಗಿಯೂ ಹೆಸರು ಮಾಡಿರುವ ಸುನೀಲ್ ರಾವ್ ಸಂಗೀತದ ಕುಟುಂಬದಿಂದ ಬಂದವರು ಸುನೀಲ್ ರಾವ್ ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. 

ನೀವು ಹೇಳಿದ್ರೆ ಸಂಶೊಧನೆ,, ನಾವ್ ಹೇಳಿದ್ರೆ ಹುಸಿ ವಿಜ್ಞಾನ 

ಹಿರಿಯ ನಟ ಅನಂತ್‌ ನಾಗ್ ಕೊರೋನಾ ಲಸಿಕೆ ಪಡೆದುಕೊಂಡಿದ್ದು ಉಳಿದವರಿಗೂ ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಸಿನಿಮಾ ಮಂದಿರಗಳ ಭರ್ತಿಯನ್ನು ಮೊದಲಿನ ಹಾಗೆ ಅರ್ಧಕ್ಕೆ ಇಳಿಸಬೇಕು ಎಂದು ಬಿಬಿಎಂಪಿ ಪ್ರಸ್ತಾಪ ಇಟ್ಟಿದ್ದನ್ನು ಸರ್ಕಾರ ತಿರಸ್ಕರಿಸಿ ಚಿತ್ರಮಂದಿರ ಪೂರ್ಣ ಭರ್ತಿಗೆ ಅವಕಾಸ ಮಾಡಿಕೊಟ್ಟಿತ್ತು. 

View post on Instagram