Asianet Suvarna News Asianet Suvarna News

ಇಲ್ಲಿ ದುಡ್ಡುಕೊಟ್ರೆ ಪರೀಕ್ಷೆ ಪಾಸ್, ಫುಲ್ ಮಾರ್ಕ್ಸ್! ಇದು ಕರ್ನಾಟಕ ರಾಜ್ಯ ಮುಕ್ತ ವಿವಿ ಕರ್ಮಕಾಂಡ

ಮೊನ್ನೆ ಮೊನ್ನೆಯಷ್ಟೆ ಬಳ್ಳಾರಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಮೊಬೈಲ್‌ ಹಿಡಿದು ಮಾಸ್ ಕಾಪಿ ಮಾಡುತ್ತಿದ್ದ ವಿಡಿಯೋ ಬಹಿರಂಗ ಆಗಿತ್ತು. ಆದ್ರೆ ಈಗ ದುಡ್ ಕೊಟ್ರೆ ಮಾಸ್ ಕಾಪಿಗೆ ಸಿಬ್ಬಂದಿಯೇ ಅವಕಾಶ ಕೊಡುತ್ತಾರೆ ಅನ್ನೋ ರಹಸ್ಯ ಬೆಳಕಿಗೆ ಬಂದಿದೆ. 
 

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ. ಸದಾ ಒಂದಿಲ್ಲೊಂದು ಕಾಂಟ್ರವರ್ಸಿ, ಕರ್ಮಕಾಂಡಕ್ಕೆ ಸುದ್ದಿಯಾಗುತ್ತಿರುತ್ತೆ. ವಿದ್ಯಾರ್ಥಿಗಳ ಪಾಲಿಗೆ ವರ ಆಗಬೇಕಿದ್ದ ಮೈಸೂರಿನ(Mysore) ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯ ಅವರ ಪಾಲಿನ ಉರುಳಾಗಿ ಬೆಳೆದಿದೆ. ಜ್ಞಾನಾರ್ಜನೆಗೆ ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ನೀಡದೆ, ಅಕ್ರಮಗಳನ್ನು ನಡೆಸಿ ಪ್ರಾಮಾಣಿಕ ವಿದ್ಯಾರ್ಥಿಗಳ ಪಾಲಿಗೆ ಶಾಪವಾಗ್ತಿದೆ. ಇದು ಪ್ರಾಮಾಣಿಕ ವಿದ್ಯಾರ್ಥಿಯೊಬ್ಬ(Student) ವಿವಿ ಪ್ರಾಧ್ಯಾಪಕರಿಗೆ ಪೋನ್ ಮಾಡಿ ಗೋಳಾಡಿದ ಆಡಿಯೋ. ವಿವಿಯ ಸಹಾಯಕ ಪ್ರಾಧ್ಯಾಪಕ ಜಗದೀಶ್ ಬಾಬು ಹಾಗೂ ಚಿತ್ರದುರ್ಗ ಮೂಲದ ವಿದ್ಯಾರ್ಥಿಯ ಸಂಭಾಷಣೆಯಲ್ಲಿ ಮಂಡ್ಯ, ಚಿತ್ರದುರ್ಗ, ದಾವಣಗೆರೆಯ (Davanagere)ಪರೀಕ್ಷಾ ಕೇಂದ್ರಗಳ ಲಂಚಾವತಾರ ಬಿಚ್ಚಿಟ್ಟಿದ್ದಾರೆ . ಕಳೆದ ಸೆಮಿಸ್ಟರ್ ಬಹುತೇಕ ಪರೀಕ್ಷೆಗಳಲ್ಲಿ‌ ಮಾಸ್ ಕಾಫಿ ನಡೆದಿದ್ದು, ಒಂದು ಸಾವಿರ ಕೊಟ್ಟರೆ ಎಂ,ಎ ಹಾಗೂ ಎಂ.ಕಾಂ ಪರೀಕ್ಷೆಗಳಲ್ಲಿ ಹಾಗೂ ಒಂದುವರೆ ಸಾವಿರ ಕೊಟ್ಟರೆ ಎಂ.ಎಸ್ಸಿ ಪರೀಕ್ಷೆಗಳನ್ನು ಕಾಪಿ ಮಾಡಬಹುದಂತೆ. ದುಡ್ಡು ಕೊಡಲಿಲ್ಲ ಅಂದ್ರೆ ಸಪರೇಟ್ ರೂಂ ನಲ್ಲಿ ಸ್ಟ್ರಿಕ್ಟ್ ಆಗಿ ಪರೀಕ್ಷೆ ಬರೆಸ್ತಾರೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ. ಕರ್ನಾಟಕ ರಾಜ್ಯ ಮುಕ್ತ ವಿವಿ ವಿದ್ಯಾರ್ಥಿಗಳಿಗೆ ವರವಾಗಲಿ ಎಂದು ಸ್ಥಾಪನೆಯಾಗಿದೆ. ಆದ್ರಿಲ್ಲಿ ಸಿಬ್ಬಂದಿಗಳು ತಮ್ಮ ಆರ್ಥಿಕತೆಗೆ ಅನುಕೂಲವಾಗುವಂತೆ ಬಳಸಿಕೊಳ್ಳುವಂತೆ ಕಾಣ್ತಿದೆ. ರಾಜ್ಯ ಸರ್ಕಾರ ಮಧ್ಯ ಪ್ರವೆಶ ಮಾಡಿ ಈ ಕರ್ಮಕಾಂಡಕ್ಕೆ ಬ್ರೇಕ್ ಹಾಕಬೇಕಿದೆ.

ಇದನ್ನೂ ವೀಕ್ಷಿಸಿ:  Today Horoscope: ಮೇಷದಿಂದ ಮೀನ- ಯಾವ ರಾಶಿಯವರಿಗೆ ಏನುಫಲ ? ನೀವು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು ?

Video Top Stories