Kodagu : ಹೆಸರಿಗಷ್ಟೇ 'ಕೂರ್ಗ್ ವಿಲೇಜ್', ಸಾರ್ವಜನಿಕರಿಗೆ ಉಪಯೋಗವಾಗುತ್ತಿಲ್ಲ!
- ಮಡಿಕೇರಿಯ ರಾಜಾಸೀಟ್ ಬಳಿ ಆರಂಭವಾದ ಮಹತ್ವಾಕಾಂಕ್ಷೆಯ ಕೂರ್ಗ್ ವಿಲೇಜ್
- ಸುಮಾರು 94 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕೂರ್ಗ್ ವಿಲೇಜ್
- ಸಾಂಬಾರ ಪದಾರ್ಥ, ವಿಶೇಷ ತಿನಿಸುಗಳ ಮಾರಾಟಕ್ಕೆ ವೇದಿಕೆ ಕಲ್ಪಿಸುವ ಯೋಜನೆ
ಕೊಡಗು (ನ. 19): ಇಲ್ಲಿನ ಸಾಂಬಾರ ಪದಾರ್ಥ, ಇಲ್ಲಿನ ವಿಶೇಷ ತಿನಿಸುಗಳು, ಮಹಿಳೆಯರು ತಯಾರಿಸಿದ ಕರಕುಶಲ ವಸ್ತುಗಳನ್ನು ಮಾರಾಟ ಮಾಡಲು ಮಡಿಕೇರಿಯ (Madikeri) ರಾಜಾಸೀಟ್ (Raja Seat) ಬಳಿ ಇರುವ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗವನ್ನು 'ಕೂರ್ಗ್ ವಿಲೇಜ್' (Coorg Village) ಹೆಸರಿನಲ್ಲಿ ಅಭಿವೃಇದ್ಧಿಪಡಿಸಲಾಗಿತ್ತು. ಸುಮಾರು 94 ಲಕ್ಷ ರೂ. ವೆಚ್ಚದಲ್ಲಿಕೂರ್ಗ್ ವಿಲೇಜ್‍ನ್ನು ನಿರ್ಮಾಣ ಮಾಡಲಾಗಿತ್ತು.
ಶಾಲೆ ಹೊಸ ಟಚ್, ಕೊಠಡಿಯಾಯ್ತು ಸೈನ್ಸ್ ರೂಂ, ಮಲ್ಟಿ ಟ್ಯಾಲೆಂಟೆಡ್ ವಿಜ್ಞಾನ ಶಿಕ್ಷಕನ ಕಮಾಲ್!
ಇದಕ್ಕಾಗಿ ಇಲ್ಲಿ 15 ಮಳಿಗೆಯನ್ನೂ ನಿರ್ಮಾಣ ಮಾಡಲಾಗಿದೆ. ಕಳೆದ ಜೂನ್‍ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ. ಸೋಮಣ್ಣ ಉದ್ಘಾಟನೆಯನ್ನೂ ಮಾಡಿದ್ರು. ಆದ್ರೆ ಹೆಸರಿಗಷ್ಟೇ ಉದ್ಘಾಟನೆಯಾಗಿದ್ದು. ಅದಾದ ನಂತರ ಸಾರ್ವಜನಿಕರ ವೀಕ್ಷಣೆಗೆ ಮಾತ್ರ ತೆರೆದುಕೊಂಡಿಲ್ಲ. ಇದೀಗ ಈ ಪ್ರದೇಶದಲ್ಲಿ ಕಾಡು ಕೂಡಿಕೊಂಡಿದ್ದು, ನಿರ್ವಹಣೆಯಿಲ್ಲದೆ ಸೊರಗಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ತಲೆಯೆತ್ತಿದ ಯೋಜನೆ ಈ ರೀತಿ ನಿರ್ಲಕ್ಷ್ಯಕ್ಕೊಳಗಾಗಿದ್ದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.